

ಭಾಲ್ಕಿ: ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಬೀದರ್‌ನಲ್ಲಿ ಇತ್ತೀಚೆಗೆÉ ನಡೆದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರು ವೈಯಕ್ತಿಕ, ಗುಂಪು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.
ಕ್ರೀಡೆ ವಿವರ : ವಿದ್ಯಾರ್ಥಿ ವೀರಭದ್ರ ಮತ್ತು ಸಿದ್ದಲಿಂಗ ಬಾಲಕರ ಕುಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನ. ಚೆಸ್‌ನಲ್ಲಿ ಅಲೋಕ ವಿನಾಯಕ ಪ್ರಥಮ, ೨೦೦ಮೀ ಓಟ ಮತ್ತು ಉದ್ದ ಜಿಗಿತದಲ್ಲಿ ಶ್ರೀಕಾಂತ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಬಾಸ್ಕೆಟ್ ಬಾಲ್ ವಿವೇಕ ದ್ವಿತೀಯ, ಫುಟ್ಬಾಲ್ ರಜತ್ ತಂಡಕ್ಕೆ ದ್ವಿತೀಯ ಸ್ಥಾನ, ಬ್ಯಾಡ್ಮಿಂಟನ್ ಸುಶೀಲ್ ತಂಡ ದ್ವಿತೀಯ, ಶಟಲ್ ಬ್ಯಾಡ್ಮಿಂಟನ್ ಆಕಾಶ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಬಾಲಕಿಯರ ವಿಭಾಗದ ಯೋಗದಲ್ಲಿ ಅಂಕಿತ ನಿಧಿ ಪ್ರಥಮ, ೨೦೦ಮೀ ಒಟದಲ್ಲಿ ವಸುಂದರಾ ದ್ವಿತೀಯ, ರಿಲೇಯಲ್ಲಿ ಪ್ರಾರ್ಥನಾ, ವಸುಂದರಾ, ಭುವನ ಲಾವಣ್ಯ ದ್ವಿತೀಯ, ಬಾಸ್ಕೆಟ್ ಬಾಲ್ ನಿಸರ್ಗ ತಂಡ ಪ್ರಥಮ ಮತ್ತು ಶಟಲ್ ಬ್ಯಾಡ್ಮಿಂಟನ್ ತನುಶ್ರೀ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಹರ್ಷ: ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಲೆಕ್ಕಾಧಿಕಾರಿ ಗುರುಸಿದ್ದಯ್ಯ, ಕಚೇರಿ ಅಧೀಕ್ಷಕ ಗಣಪತಿ ಭೂರೆ, ದೈಹಿಕ ನಿರ್ದೇಶಕ ಅನಿಲಕುಮಾರ ಪಾಟೀಲ್, ಸ್ವಪ್ನಾ ಸತೀಶ ಕುರುಬಖೇಳಗೆ ಮತ್ತು ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕುಟದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದು ಕೊಂಡಿರುವುದು ಸಂತಸ ತರಿಸಿದೆ. ಸಾಧನೆಗೈದ ಕ್ರೀಡಾಪಟುಗಳಿಗೆ ಅಭಿನಂದನೆಗಳು.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ