

ನಾಲತವಾಡ: ಶಾಲಾ ಶಿಕ್ಷಣ ಇಲಾಖೆ (ಪಪೂ) ವಿಜಯಪುರ ಹಾಗೂ ಬೆಸ್ಟ್ ಪದವಿ ಪೂರ್ವ ಕಾಲೇಜು ಮಿಣಜಗಿ ಕ್ರಾಸ್ ತಾಳಿಕೋಟೆ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಖೋಖೋ ಕ್ರೀಡಾಕೂಟದಲ್ಲಿ ಸ್ಥಳೀಯ ವೀರೇಶ್ವರ ಪಪೂ ಕಾಲೇಜಿನ ಬಾಲಕರು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಸಕ ಸಿ.ಎಸ್.ನಾಡಗೌಡ, ಸಂಸ್ಥೆ ಅಧ್ಯಕ್ಷ ಡಾ.ಎಸ್.ಎಂ.ಸಜ್ಜನ, ಪ್ರಾಚಾರ್ಯ ಡಾ.ದತ್ತಾತ್ರೇಯ ಮಳಖೇಡ, ತರಬೇತುದಾರ ಅರುಣಕುಮಾರ ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ವೀರೇಶ ಗದಗಿನ ಹಾಗೂ ನಾಗಯ್ಯ ಹಿರೇಮಠ ಇದ್ದರು.