

ಗಂಗೊಳ್ಳಿ: ಕಾರ್ಕಳದ ಪೆರ್ವಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಡರ್ 14 ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಆರ್ಯನ್ ವಿ.ಕೆ. ದ್ವಿತೀಯ ಸ್ಥಾನ ಗಳಿಸಿ, ಬೀದರ್ನಲ್ಲಿ ನಡೆಯಲಿರುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಪನ್ಯಾಸಕಿ ಸುಗುಣಾ ಆರ್.ಕೆ. ಮತ್ತು ಪಶು ವೈದ್ಯಾಧಿಕಾರಿ ವಸಂತ್ ಕುಮಾರ್ ದಂಪತಿ ಪುತ್ರ. ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.