ರಾಜ್ಯಮಟ್ಟಕ್ಕೆ ಆಯ್ಕೆ

18 vikram 4
Published on

ಧಾರವಾಡ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭಗವದ್ಗೀತಾ ಅಭಿಯಾನದಲ್ಲಿ ಧಾರವಾಡ ನೀರಲಕಟ್ಟಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವೀರರಾಜ ಕೆ. ಹಾಗೂ ಶಶಿಧರ ಮಂತ್ರಿ ಪ್ರಥಮ, ರಸಪ್ರಶ್ನೆಯಲ್ಲಿ ದಾನೇಶ ಎಂ.ವಿ. ದ್ವಿತೀಯ, ಸಂಸ್ಕೃತ ದೇವ ತೃತಿಯ, ಭಾಷಣದಲ್ಲಿ ನರಸಿಂಹ ಆರ್.ಬಿ. ತೃತೀಯ, ಶ್ರೇಯಸ ಯಮಕನಮರಡಿ ತೃತೀಯ ಸ್ಥಾನ ಪಡೆದಿದ್ದಾರೆ.
ರಸಪ್ರಶ್ನೆಯಲ್ಲಿ ದಾನೇಶ ಎಂ.ವಿ., ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವೀರರಾಜ ಕೆ. ಹಾಗೂ ಶಶಿಧರ ಮಂತ್ರಿ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನಗೆ ಶಾಲೆ ಪ್ರಾಚಾರ್ಯರು, ಕಾರ್ಯದರ್ಶಿ, ಆಡಳಿತಾಧಿಕಾರಿ ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net