

ಧಾರವಾಡ: ನವನಗರದ ಈಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 14 ಮತ್ತು 17 ವಯೋಮಿತಿ ಒಳಗಿನ ಬಾಲಕ ಹಾಗೂ ಬಾಲಕಿಯರ ಜಿಲ್ಲಾಮಟ್ಟದ ಜೋಡೋ ಕ್ರೀಡಾ ಸ್ಪರ್ಧೆಯಲ್ಲಿ ಧಾರವಾಡದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
14 ವಯೋಮಿತಿ ಒಳಗಿನ ಬಾಲಕರ ವಿಭಾಗದಲ್ಲಿ ಮಲಿಕಅಯಾನ್ ಬಸಾಪುರ (30 ಕೆ.ಜಿ), ಪ್ರೀತಮ ಡೊಳ್ಳಿನ (35 ಕೆಜಿ), ಮೊಹಮ್ಮದ್ ಜುಬೇರ ಅಹಮ್ಮದ (40 ಕೆಜಿ), ಶಿವರಾಜ ಮುಮ್ಮಿಗಟ್ಟಿ (45 ಕೆಜಿ), ಸುಬ್ರಹ್ಮಣ್ಯ ಗುಮ್ಮಗೋಳ (55 ಕೆಜಿ) ಹಾಗೂ ಬಾಲಕಿಯರ ವಿಭಾಗದಲ್ಲಿ ಸರಸ್ವತಿ ಸಪೂರಿ (32 ಕೆಜಿ), ರಿನಾಜ ಸುಬೇದಾರ (36 ಕೆಜಿ), ಫಲಕನಾಜ ಬಸಾಪುರ (44 ಕೆಜಿ), ಸ್ನೇಹಾ ಮಾಡೊಳ್ಳಿ (44 ಕೆಜಿ) ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.