

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಪ್ರಕೃತಿಯ ಅದ್ಭುತಗಳನ್ನು ತಿಳಿಯುವ ಕುತೂಹಲ ನಮ್ಮಲ್ಲಿರಬೇಕು. ಪರಿಸರ ಸೌಂದರ್ಯ ಆಸ್ವಾದಿಸಲು ಚಾರಣ ಸಹಕಾರಿಯಾಗಿದೆ. ಚಾರಣ ಮನಸ್ಸಿಗೆ ಸಂತಸ ನೀಡುವುದರೊಂದಿಗೆ ಆರೋಗ್ಯ ವೃದ್ಧಿಗೆ ಪೂರಕವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ ರಾಜ್ಯ ಮುಖ್ಯಆಯುಕ್ತ ಪಿ.ಜಿ.ಆರ್.ಸಿಂಧ್ಯ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಸ್ಥಳೀಯ ಸಂಸ್ಥೆ ಪಂಜ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸಹಯೋಗದಲ್ಲಿ ಕೆಎಸ್‌ಎಸ್ ಕಾಲೇಜಿನಲ್ಲಿ ರಾಜ್ಯಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳ ಚಾರಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ, ಕುಮಾರಸ್ವಾಮಿ ವಿದ್ಯಾಲಯದ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ ಭಟ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತರಾಜ್ ಕೆ., ಕಾಲೇಜಿನ ರೋವರ್ ರೇಂಜರ್ ಲೀಡರ್‌ಗಳಾದ ಮನೋಹರ್, ರಾಮಪ್ರಸಾದ್, ಪ್ರಮೀಳಾ ಉಪಸ್ಥಿತರಿದ್ದರು. ಮಾಧವ ಬಿ.ಕೆ. ಸ್ವಾಗತಿಸಿದರು. ಜಯವಂತಿ ಸೋನ್ಸ್ ವಂದಿಸಿದರು. ಉದಯಕುಮಾರ್ ರೈ ಎಸ್.ಬಾಳಿಲ ಕಾರ್ಯಕ್ರಮ ನಿರೂಪಿಸಿದರು.
ಆಯುಕ್ತರಿಗೆ ಗೌರವಾರ್ಪಣೆ
ಸ್ಕೌಟ್ಸ್ ಮತ್ತು ಗೈಡ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಅವರನ್ನು ಸ್ಥಳೀಯ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ರಾಜ್ಯದ 29 ಜಿಲ್ಲೆಗಳಿಂದ 118 ರೋವರ್ಸ್, 69 ರೇಂಜರ್ಸ್, 40 ಮಂದಿ ಸರ್ವೀಸ್ ರೋವರ್ ಮತ್ತು ರೆಂಜರ್ಸ್, 4 ದಳ ನಾಯಕರು, 14 ಮಂದಿ ಶಿಬಿರ ಸಹಾಯಕರು ಸಹಿತ ಒಟ್ಟು 245 ಮಂದಿ ಭಾಗವಹಿಸಿದ್ದರು.