ರಾಜ್ಯಮಟ್ಟದ ಛಾಯಾಚಿತ್ರ, ಕಿರು ವಿಡಿಯೋ ಸ್ಪರ್ಧೆ: ಸಾರ್ವಜನಿಕರಿಂದ ಅರ್ಜಿ ಆಹ್ವಾನ

mysore
Published on

ಮೈಸೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರಿನ ಅನ್ವೇಷಿಸದ ಪ್ರವಾಸಿ ತಾಣಗಳು ಎಂಬ ಶೀರ್ಷಿಕೆಯಡಿ ರಾಜ್ಯ ಮಟ್ಟದ ಛಾಯಾಚಿತ್ರ ಮತ್ತು ಕಿರು ವಿಡಿಯೋ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.


ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನದಿಗಳು, ಪ್ರಕೃತಿ ಮತ್ತು ರಮಣೀಯ ಸೌಂದರ್ಯ ತಾಣಗಳು, ಜಲಪಾತಗಳು, ವಸ್ತು ಸಂಗ್ರಹಾಲಯಗಳು, ಜಾನಪದ ಹಾಗೂ ಕಲೆಗಳು, ಸಾಂಪ್ರದಾಯಿಕ ಸ್ಥಳೀಯ ಹಬ್ಬಗಳು ಮತ್ತು ಕಲೆಗಳು, ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳು, ಧಾರ್ಮಿಕ ಮತ್ತು ಸಾಹಸ ಪ್ರವಾಸೋದ್ಯಮ ಹಾಗೂ ಇತರ ತಾಣಗಳ ಛಾಯಾಚಿತ್ರ ಮತ್ತು ಕಿರು ವಿಡಿಯೋ ಕಳುಹಿಸಬಹುದಾಗಿದೆ.

ಆಯ್ಕೆಯಾದ ಅತ್ಯುತ್ತಮ ಸಲ್ಲಿಕೆಗಳಿಗೆ ಪ್ರಥಮ ಬಹುಮಾನವಾಗಿ 25,000 ರೂ., ದ್ವಿತೀಯ ಬಹುಮಾನ 15,000 ರೂ. ಹಾಗೂ ತೃತೀಯ ಬಹುಮಾನವಾಗಿ 10,000 ರೂ. ದೊರೆಯಲಿದೆ


ಆಸಕ್ತರು https://mysore.nic.in/en/competitions ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜೂ.20 ಅಂತಿಮ ದಿನವಾಗಿದೆ. ಮಾಹಿತಿಗಾಗಿ ಮೊ. 7411564510, 9008693409 ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net