

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೀಡಾ ದಿನಾಚರಣೆ ನಿಮಿತ್ತ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದಲ್ಲಿ ರಾಜ್ಯ ಮಟ್ಟದ ಮುಕ್ತ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ನಡೆಸಲಾಯಿತು.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಗಂಣದಿಂದ ಆರಂಭಗೊಂಡ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ಕೆಸಿಡಿ ಮಾರ್ಗವಾಗಿ ಕೆಲಗೇರಿ ಗುಡ್ಡದಮಠ ಕಲ್ಯಾಣ ಮಂಟಪದವರೆಗೆ ಜರುಗಿತು. ಈ ವೇಳೆ ಧಾರವಾಡ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
10 ಕಿಮೀ ಪುರುಷರ ಓಟದ ಸ್ಪರ್ಧೆಯಲ್ಲಿ ಬೆಳಗಾವಿಯ ಶಿವಾನಂದ ನಾಯಕ್ (ಪ್ರಥಮ), ಹುಬ್ಬಳ್ಳಿಯ ನಾಗರಾಜ್ ದಿವಟೆ (ದ್ವಿ), ಬೆಂಗಳೂರಿನ ವೆಂಕಟೇಶ ಕೆ.ಕೆ. (ತೃ), ಪ್ರಭು ಲಮಾಣಿ (4ನೇ ಸ್ಥಾನ), ಬಾಗಲಕೋಟೆಯ ಸಂಗಮೇಶ ಹಳ್ಳಿ (5), ಹಾವೇರಿಯ ಸಂಜು ಬೆಟ್ಟಪ್ಪನವರ (6)ನೇ ಸ್ಥಾನ ಪಡೆದಿದರು.
ಮಹಿಳಾ ವಿಭಾಗದದಲ್ಲಿ ಬೆಂಗಳೂರಿನ ರಾಶಿ ಸಿ.ಎಂ. (ಪ್ರ), ಧಾರವಾಡದ ಶಿಲ್ಪಾ ಹೊಸಮನಿ (ದ್ವಿ), ಶಿವಮೊಗ್ಗದ ಎಚ್.ವಿ. ದೀಕ್ಷಾ (ತೃ), ಧಾರವಾಡದ ಸುಶ್ಮಿತಾ ಮುಗಳಿ (4), ಸುಪ್ರಿತಾ ಸಿದ್ದಿ (5), ವಿಜಯಲಕ್ಷ್ಮೀ ಕರಿಲಿಂಗಣ್ಣವರ (6)ನೇ ಸ್ಥಾನ ಪಡೆದಿದ್ದಾರೆ.
16 ವರ್ಷದೊಳಗಿನ 4 ಕಿಮೀ ಬಾಲಕರ ವಿಭಾಗದಲ್ಲಿ ಧಾರವಾಡದ ಚೇತನ ದೊಡ್ಡಮನಿ (ಪ್ರ), ರಾಮನಗೌಡ ಪಾಟೀಲ (ದ್ವಿ), ವೀರನಗೌಡ ಪಾಟೀಲ (ತೃ), ಕಾರ್ತಿಕ ತೊಡಳ್ಳಿ (4), ಬಸವರಾಜ ರಾಮಶೆಟ್ಟಿ (5), ಉಮೇಶ ರಾಥೋಡ್ (6)ನೇ ಸ್ಥಾನ ಪಡೆದರೆ, ಇದೇ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಧಾರವಾಡದ ಶ್ವೇತಾ ಬಡಿಗೇರ (ಪ್ರ), ಲಕ್ಷ್ಮೀ ಗೊಣದಿನ್ನಿ (ದ್ವಿ), ಪ್ರೀತಿ ಬಿ. ಅಮಟಿ (ತೃ), ಚೈತ್ರಾ ಪುಟ್ಟಣ್ಣನವರ (4), ಪೃಥ್ವಿ ಪೂಜಾರ (5) ಹಾಗೂ ಲಕ್ಷ್ಮೀ ಓಬಣ್ಣವರ 6ನೇ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಲಾಯಿತು.
ಪಾಲಿಕೆ ಪ್ರತಿಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ರವೀಂದ್ರ ಕುರಬಗಟ್ಟಿ ಚಾಲನೆ ನೀಡಿದರು. ಬಹುಮಾನ ವಿತರಣೆ ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಮೃತ ದೇಸಾಯಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಈರೇಶ ಅಂಚಟಗೇರಿ, ಮಹೇಶ ಶೆಟ್ಟಿ, ಪಿ.ಎಚ್. ನೀರಲಕೇರಿ, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ, ಸವಿತಾ ಅಮರಶೆಟ್ಟಿ, ಇತರರು ಉಪಸ್ಥಿತರಿದ್ದರು.