

ಬೈಂದೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪಪೂ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನ.22, 23ರಂದು ಸ್ವತಂತ್ರ ಪದವಿ ಪೂರ್ವ ಕಾಲೇಜು ಶ್ರೀ ಮೂಕಾಂಬಿಕಾ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಪೂ ವಿದ್ಯಾರ್ಥಿಗಳ ಹೊನಲು ಬೆಳಕಿನ ನೆಟ್‌ಬಾಲ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ.
ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿ ಮಾರ್ಗದರ್ಶನದಲ್ಲಿ ಶಾಲೆ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು, ದೈಹಿಕ ಶಿಕ್ಷಣ ಉಪನ್ಯಾಸಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾಸಂಸ್ಥೆ ಶಿಕ್ಷಕರ ಸಹಕಾರದೊಂದಿಗೆ ಎರಡು ದಿನ ನಡೆಯುವ ಕ್ರೀಡಾಕೂಟಕ್ಕೆ ರಾಜ್ಯದ 25 ಜಿಲ್ಲೆಗಳ 50 ತಂಡಗಳು ಭಾಗವಹಿಸುತ್ತಿವೆ.
ಹತ್ತು ವರ್ಷಗಳಲ್ಲಿ 3ನೇ ಬಾರಿಗೆ ರಾಜ್ಯಮಟ್ಟದ ಪಿಯುಸಿ ನೆಟ್‌ಬಾಲ್ ಪಂದ್ಯಾಟಕ್ಕೆ ಕೊಲ್ಲೂರು ಮತ್ತೆ ರಂಗೇರಲಿದೆ. 700 ಕ್ರೀಡಾಳುಗಳು, 60 ತಂಡದ ವ್ಯವಸ್ಥಾಪಕರು, 100 ಅಧಿಕಾರಿಗಳು ಭಾಗವಹಿಸಲಿದ್ದಾರೆ.