

ಮೈಸೂರು: ನಗರದ ಅಮೃತ ವಿಶ್ವ ವಿದ್ಯಾಪೀಠಂನಲ್ಲಿ ಇತ್ತೀಚೆಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಸದ್ಗಮಯ-2020’ ರಾಜ್ಯಮಟ್ಟದ ಮಲ್ಟಿ ಫೆಸ್ಟ್‌ನಲ್ಲಿ ರಾಜ್ಯದ 40 ಕಾಲೇಜುಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಎರಡು ದಿನಗಳವರೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಾಗಾರಗಳು ಆಕರ್ಷಿಸಿದವು. ರೋಬೋಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್, ಉದ್ಯಮಶೀಲತೆ, ನೇಲ್ ಆರ್ಟ್ ಆ್ಯಂಡ್ ಮೇಕಪ್ ಹಾಗೂ ಕುಂಬಾರಿಕೆ ಕುರಿತಾದ ಕಾರ್ಯಾಗಾರಗಳು ಅನೇಕ ಮಾಹಿತಿ ನೀಡಿದವು.
ಹ್ಯಾಕಥಾನ್, ರೋಡೀಸ್, ವೆಬ್ ಡೆವೆಲಪ್‌ಮೆಂಟ್, ಡಿಜಿಟಲ್ ತ್ರಶರ್ ಹಂಟ್, ರೋವೆಂಜರ್ಸ್, ಬೆಸ್ಟ್ ಆಂತ್ರಪ್ರನರ್, ಬ್ಯುಸಿನೆಸ್ ಕ್ವಿಜ್, ಪಿಂಚ್ ಆಫ್ ಪನಿಶ್‌ಮೆಂಟ್, ಸೈನ್ಸ್ ಮಾಡೆಲ್ ಆ್ಯಂಡ್ ಕೊಲಾಜ್ ಮೇಕಿಂಗ್, ಬಾಲಿವುಡ್ ಕ್ವಿಜ್, ಟಿಕ್‌ಟಾಕ್, ಫೋಟೋಗ್ರಫಿ, ಕಥೆ ಹೇಳುವಿಕೆ, ಕವನ ವಾಚನ, ಲಿಟರರಿ ಕ್ವಿಜ್, ಭಗವದ್ಗೀತಾ ಪಠಣ, ಸೋಲೋ ಸಿಂಗಿಂಗ್, ವಾದ್ಯ ಸಂಗೀತ ಹಾಗೂ ಮಿನಿ ಕ್ರಿಕೆಟ್ ಹೀಗೆ ಹತ್ತಾರು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಫೆಸ್ಟ್‌ನ ಮುಖ್ಯ ಆಕರ್ಷಣೆ ಸೈನ್ಸ್ ಪಾರ್ಕ್. ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತ್ತರ ಪದವಿ ವಿದ್ಯಾರ್ಥಿಗಳು ಈ ಸೈನ್ಸ್ ಪಾರ್ಕ್‌ನಲ್ಲಿ ವೈವಿಧ್ಯಮಯ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ ಆನಂದಿಸಿದರು. ವಿಜ್ಞಾನವೂ ಕೂಡ ಮನರಂಜನೆ ನೀಡಬಹುದಾದ ವಿಷಯ ಎಂಬುದಕ್ಕೆ ಈ ಸೈನ್ಸ್ ಪಾರ್ಕ್ ಸಾಕ್ಷಿಯಾಯಿತು.
‘ಮೈಕಾ’ಗೆ ಸಮಗ್ರ ಪ್ರಶಸ್ತಿ: ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಆರ್ಟ್ಸ್ (ಮೈಕಾ) ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು.
ಖ್ಯಾತ ಚಿತ್ರನಟ, ರಂಗಕರ್ಮಿ ಮಂಡ್ಯ ರಮೇಶ್ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ. ಇಂತಹ ಫೆಸ್ಟ್‌ಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಬೌದ್ಧಿಕ ಹಾಗೂ ಭಾವನಾತ್ಮಕ ಅಂಶಗಳನ್ನು ಸಮತೋಲನಗೊಳಿಸಿಕೊಳ್ಳಬಹುದು ಎಂದರು.
ಇದಕ್ಕೂ ಮುನ್ನ ಅಮೃತ ವಿಶ್ವವಿದ್ಯಾಪೀಠಂನ ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಡಾ.ಬಾಲಕೃಷ್ಣನ್ ಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು.