

ಕೆ.ಆರ್.ನಗರ: ತಾಲೂಕಿನ ಗಂಧನಹಳ್ಳಿ ಗ್ರಾಮದ ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಜಿ.ಎನ್.ಮಲ್ಲೇಗೌಡರ 2ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮೊದಲನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಏ.5 ಶನಿವಾರ ಮತ್ತು 6ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಗಂಧನಹಳ್ಳಿ ಹೇಮಂತ್ ಮಾಹಿತಿ ನೀಡಿದರು.
ಗಂಧನಹಳ್ಳಿ ಗ್ರಾಮದಲ್ಲಿ ಗ್ರಾಮದ ಯಜಮಾನರೊಟ್ಟಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡಿಗಡೆಗೊಳಿಸಿ ಮಾತನಾಡಿ, ಕಾರ್ಯಮದ ಅಧ್ಯಕ್ಷತೆಯನ್ನು ಶಾಸಕ ಡಿ. ರವಿಶಂಕರ್ ವಹಿಸಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುಖಂಡ ಜಿ.ಎಸ್.ವೆಂಕಟೇಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಪಂ ಮಾಜಿ ಸದಸ್ಯ ಅಮಿತ್ ದೇವಹರಟ್ಟಿ ಕಾರ್ಯಕ್ರಮದ ಜ್ಯೋತಿ ಬೆಳಗಲಿದ್ದಾರೆ.
ಕಬಡ್ಡಿ ಪಂದ್ಯಕ್ಕೆ ಕೆ.ಆರ್.ಪೇಟೆಯ ಸಮಾಜ ಸೇವಕ ಮಲ್ಲಿಕಾರ್ಜುನ್ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ಪುಷ್ಪಲತಾ ಸಿ.ಪಿ.ರಮೇಶ್ ಚಾಲನೆ ನೀಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಪುರಸಭೆ ಅಧ್ಯಕ್ಷ ಶಿವುನಾಯಕ್, ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಶಿವಣ್ಣ, ಕೆಪಿಸಿಸಿ ಹಿಂದುಳಿದ ವರ್ಗಗಳ ಒಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಯೋಗೇಶ್, ಗಂಧನಹಳ್ಳಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ಬಲರಾಮ್, ತಾಲೂಕು ಹಾಲು ಉತ್ಪಾದಕರ ನೌಕರರ ಸಂಘ ಅಧ್ಯಕ್ಷ ಜೆ.ಕೆ.ಮಹದೇವು ಭಾಗವಹಿಸಲಿದ್ದಾರೆ.
ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯು ಗಂಧನಹಳ್ಳಿ ಗ್ರಾಮದ ಸಂಗೋಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ನಡೆಯಲಿದ್ದು, ಪ್ರಥಮ ಬಹುಮಾನ: 25,555 ರೂ. ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 15,555 ರೂ., ಆಕರ್ಷಕ ಟ್ರೋಫಿ, ತೃತೀಯ ಬಹುಮಾನ : 9,999 ರೂ. ಆಕರ್ಷಕ ಟ್ರೋಫಿ, ನಾಲ್ಕನೇ ಬಹುಮಾನ 5,555 ರೂ. ಆಕರ್ಷಕ ಟ್ರೋಫಿ, ಪ್ರವೇಶ ಶುಲ್ಕ 1,299 ರೂ. ಅತ್ಯುತ್ತಮ ಆಲ್‌ರೌಂಡರ್, ಅತ್ಯುತ್ತಮ ರೈಡರ್, ಅತ್ಯುತ್ತಮ ಡಿಫೆಂಡರ್‌ಗಳಿಗೆ ಆಕರ್ಷಕ ಬಹುಮಾನ ಇರುತ್ತದೆ. ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕರು ಅಥವಾ ದೂ. ದೂ. 9742843039, 9743029293, 9632988801, 829682527, 8105890640, 6362468636 ಸಂಪರ್ಕಿಸಬಹುದು.