

ಕಿಕ್ಕೇರಿ: ಸಮೀಪದ ಮಾರೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದ್ದ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮಟ್ಟದ ಆರೋಗ್ಯ ಇಲಾಖೆಯ ತಂಡ ಗುರುವಾರ ಗ್ರಾಮಕ್ಕೆ ಆಗಮಿಸಿ ಆರೋಗ್ಯ, ಪರಿಸರ ಕುರಿತು ತಪಾಸಣೆ ನಡೆಸಿತು.
ರಾಜ್ಯ ಸರ್ವೇಕ್ಷಣಾ ಘಟಕದ ಸೋಂಕುರೋಗ ತಜ್ಞ ಡಾ.ಶ್ರೀನಿವಾಸ್ ಮಾತನಾಡಿ, ವಾಂತಿ-ಭೇದಿ ಪ್ರಕರಣ ಸಂಭವಿಸಿದ ಕಾರಣ ಪ್ರತಿನಿತ್ಯ ನೀರಿನ ತಪಾಸಣೆ ಮಾಡಲಾಗುತ್ತಿದೆ. ಹಾಸನ ಸೇರಿದಂತೆ ವಿವಿಧೆಡೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ರೋಗಿಗಳು ಗುಣಮುಖರಾಗುತ್ತಿದ್ದಾರೆ. ವೈರಲ್ ಡಯೇರಿಯಾ ಸಮಸ್ಯೆ ಇರಬಹುದಾಗಿದೆ. ಆರೋಗ್ಯ ಶುಚಿತ್ವಕ್ಕೆ ಒತ್ತು ನೀಡಿ. ಗ್ರಾಮ ಶುಚಿತ್ವ, ಕೈಗಳನ್ನು ಸೋಪು, ಡೆಟಾಲ್‌ನಿಂದ ಉಜ್ಜಿ ತೊಳೆದುಕೊಳ್ಳಿ. ಆತಂಕ ಬೇಡ. ಶುಚಿತ್ವ, ಶುದ್ಧ ಕುಡಿಯುವ ನೀರಿನ ಬಳಸಲು ಕಾಳಜಿ ವಹಿಸಿ ಎಂದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಕುಮಾರ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅಜಿತ್, ಡಾ.ಹರ್ಷವರ್ದಿನಿ, ಪಿಡಿಒ ದಿನೇಶ್, ಗ್ರಾಂಪಂ ಅಧ್ಯಕ್ಷ ಕುಬೇರ, ಸದಸ್ಯ ಕೆಂಪರಾಜು, ಕುಮಾರ್, ನಾಗೇಶ್, ಲಕ್ಷ್ಮಮ್ಮ, ಆರೋಗ್ಯ ಇಲಾಖೆ ಸಿಬ್ಬಂದಿ ಶಿವಸ್ವಾಮಿ,ದಮೆರ್ಂದ್ರ, ನವೀನ್, ರೇಖಾ, ಲೀಲಾವತಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.