ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ಉಷಾ ಆಯ್ಕೆ

6ckd1
Published on

ಚಿಕ್ಕೋಡಿ: ಇಲ್ಲಿನ ಸಿಎಲ್‌ಇ ಸಂಸ್ಥೆ, ಬೆಂಗಳೂರಿನ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಈಚೆಗೆ ನಡೆದ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯಲ್ಲ್ಲಿ ಸಿಎಲ್‌ಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಷಾ ನೇರ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ವಿದ್ಯಾರ್ಥಿನಿ ಸಾಧನೆಗೆ ಉಪನಿರ್ದೇಶಕರು ಚಿಕ್ಕೋಡಿ, ಸಿಎಲ್‌ಇ ಸಂಸ್ಥೆ ಕಾರ್ಯದರ್ಶಿ ಜಗದೀಶ ಕವಟಗಿಮಠ, ನಿರ್ದೇಶಕ ಅಜಯ ಕವಟಗಿಮಠ, ಆಡಳಿತಾಧಿಕಾರಿ ಸಾಗರ ಬಿಸ್ಕೋಪ್, ಪಿಯು ಕಾಲೇಜಿನ ಆಡಳಿತಾಧಿಕಾರಿ ಪ್ರಶಾಂತ ಕೊಂಡೆಬೆಟ್ಟು, ಪ್ರಾಚಾರ್ಯ ಎಸ್.ಬಿ.ಪಾಟೀಲ, ಉಪ ಪ್ರಾಚಾರ್ಯ ಡಿ.ಎಸ್.ಕೊಟಬಾಗಿ, ಬೆಳಗಾವಿ ಸಹಕಾರಿ ಯೂನಿಯನ್ ಪದಾಧಿಕಾರಿಗಳು, ಸಂಯೋಜಕ ಡಾ. ಸುರೇಶ ಹಾದಿಮನಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net