

ತಿ.ನರಸೀಪುರ: ವಾಟಾಳು ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 76 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಶಾರದ ಡಾನ್ಸ್ ಅಕಾಡೆಮಿ ವತಿಯಿಂದ 3ನೇ ವರ್ಷದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವಿದ್ಯೋದಯ ಕಾಲೇಜಿನ ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಹೇಳಿದರು.
ಡಿ.25 ರಂದು 76ನೇ ವಸಂತಕ್ಕೆ ಪದಾರ್ಪಣೆ ಮಾಡಲಿರುವ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೊದಲ ಬಹುಮಾನವಾಗಿ 50,000 ರೂ., ದ್ವಿತೀಯ ಬಹುಮಾನವಾಗಿ 30,000 ರೂ. ಹಾಗೂ ತೃತೀಯ ಬಹುಮಾನವಾಗಿ 20,000 ರೂ. ನೀಡಲಾಗುವುದು. ನೃತ್ಯ ಕಲಾವಿದರಿಗೆ ಯಾವುದೇ ವಯೋಮಿತಿ ನಿಗದಿ ಮಾಡಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ ಂದು ತಿಳಿಸಿದರು.
ಶ್ರೀ ಶಾರದ ಡಾನ್ಸ್ ಅಕಾಡೆಮಿ ಅಧ್ಯಕ್ಷೆ ಪುಷ್ಪಾ ಸುನೀಲ್ ಮಾತನಾಡಿ, ಸ್ಪರ್ಧೆಯಲ್ಲಿ ಎಲ್ಲ ಭಾಷೆಯ ಗೀತೆಗಳಿಗೂ ಆದ್ಯತೆ ನೀಡಲಾಗಿದ್ದು, ಗ್ರೂಪ್ ಡಾನ್ಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಶುಲ್ಕ 4,000 ರೂ. ಇರಲಿದೆ. ಖಾಸಗಿ ವಾಹಿನಿಯಲ್ಲಿ ಕೊರಿಯೋಗ್ರಾಫರ್‌ಗಳಾಗಿರುವ ಪವನ್‌ಕುಮಾರ್‌ಹಾಗೂ ಪ್ರಮೋದ್ ಕುಮಾರ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಆಸಕ್ತ ನೃತ್ಯ ಕಲಾವಿದರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9611555419 ಹಾಗೂ 9380768447 ಕರೆ ಮಾಡಿ ಸಂಪರ್ಕಿಸುವಂತೆ ತಿಳಿಸಿದರು.
ಅಕಾಡೆಮಿ ಉಪಾಧ್ಯಕ್ಷೆ ಶುಭಾ ಬಸವರಾಜು, ನೃತ್ಯ ಶಿಕ್ಷಕ ಬಸವರಾಜು ಸುದ್ದಿಗೋಷ್ಠಿಯಲ್ಲಿದ್ದರು.