ಬೆಂಗಳೂರಿನಲ್ಲಿ ಶೀಘ್ರ ರಾಜ್ಯ ಮಟ್ಟದ ಸಮಾವೇಶ

16Hnp1
ಹೊಳೆನರಸೀಪುರದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶದಲ್ಲಿ 250 ಕ್ಕೂ ಹೆಚ್ಚು ಸದಸ್ಯರು ಟೈಲರ್‌ಗಳು ಭಾಗವಹಿಸಿದ್ದರು.
Published on

ಹೊಳೆನರಸೀಪುರ: ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಟೈಲರ್‌ಗಳಿದ್ದು, 25 ವರ್ಷಗಳಿಂದ ಸಂಘಟನೆ ಇದೆ. ಆದರೂ ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಇಲ್ಲ ಎಂದು ಟೈಲರ್‌ಗಳ ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಟೈಲರ್‌ಗಳ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ಶೀಘ್ರ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿ, ತಾಲೂಕಲ್ಲಿ ಸಂಘಟನೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದರು.

ಕಾಶಿಯಾತ್ರೆ ಮುಗಿಸಿ ಹಿಂದಿರುಗಿದ ಟೈಲರ್ ದಂಪತಿ ಕಲ್ಲೇಶ್ ಹಾಗೂ ದಾಕ್ಷಾಯಿಣಿ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧೆಡೆಯಂದ 200ಕ್ಕೂ ಹೆಚ್ಚು ಮಹಿಳಾ ಟೈಲರ್‌ಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಂಘದ ತಾಲೂಕು ಅಧ್ಯಕ್ಷ ಕೆ.ಎಲ್.ರೇವಣ್ಣ, ಸದಸ್ಯರಾದ ಶಕೀರಾ, ಎಚ್.ವಿ. ರವಿ, ವಿ.ಎ.ನಾಗರಾಜು, ಯೋಗೇಶ್, ಎಸ್.ಪಿ.ಸತ್ಯನಾರಾಯಣ, ಸಿ.ಎಸ್. ಶಂಕರೇಗೌಡ, ಬಿ.ಎಂ. ನಾಗೇಂದ್ರ, ಅರಕಲಗೂಡು ತಾಲೂಕು ಅಧ್ಯಕ್ಷ ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net