

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಎಸ್‌ಡಿಎಂ ಇಂಜಿನಿಯರಿ0ಗ್ ಕಾಲೇಜ್ ಮತ್ತು ಟರ್ಬೋ ಸ್ಟೀಲ್ ಸಹಯೋಗದಲ್ಲಿ ಮಾ. 1 ಮತ್ತು 2ರಂದು ಎಸ್‌ಡಿಎಂ ಇಂಜಿನಿಯರಿ0ಗ್ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಸಿವಿಟೆಕ್ ಸಮ್ಮಿಟ್ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಸುನಿಲ ಬಾಗೇವಾಡಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 1ರಂದು ಬೆಳಗ್ಗೆ 10.30ಕ್ಕೆ ಟರ್ಬೋ ಸ್ಟೀಲ್ ರಾಯಭಾರಿ ಹಾಗೂ ನಟ ರಮೇಶ ಅರವಿಂದ ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ, ಇಆರ್‌ಎಂ ಗ್ರುಪ್‌ನ ಸಿಎಂಡಿ ಆರ್. ಪ್ರವೀಣ ಚಂದ್ರ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.