ಜು.22 ಮತ್ತು 23ರಂದು ಕಿವುಡರ ಚೆಸ್ ಸ್ಪರ್ಧೆ: ರಾಜ್ಯಮಟ್ಟದ ಟೂರ್ನಿಗೆ ಮಂಡ್ಯ ಆತಿಥ್ಯ

chess 31 mar 20
Published on

ಮಂಡ್ಯ: ನಗರದ ತಾವರೆಗೆರೆಯ ಎಸ್‌ಬಿ ಸಮುದಾಯದ ಭವನದಲ್ಲಿ ಜು.22 ಮತ್ತು 23ರಂದು 18ನೇ ರಾಜ್ಯಮಟ್ಟದ ಕಿವುಡರ ಚೆಸ್ ಸ್ಪರ್ಧೆ ಆಯೋಜಿಸಲಾಗಿದೆ.

ಜಿಲ್ಲಾ ಕಿವುಡರ ಸಂಘ, ಸಿಟಿ ಲಯನ್ಸ್ ಕ್ಲಬ್, ಪಿಡಿಎಫ್ ಲಯನ್ಸ್ ಸಂಸ್ಥೆ, ಮಂಡ್ಯ ಲಯನ್ಸ್ ಸಂಸ್ಥೆ ಮತ್ತು ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ 22ರಂದು ಬೆಳಗ್ಗೆ 9ಗಂಟೆಗೆ ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಉದ್ಘಾಟಿಸಲಿದ್ದು, ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ. 23ರಂದು ಮಧ್ಯಾಹ್ನ 1 ಗಂಟೆಗೆ ಮಂಡ್ಯ ಷುಗರ್ ಸಿಟಿ ಲಯನ್ಸ್ ಸಂಸ್ಥೆಯ ಮಾಜಿ ಗವರ್ನರ್ ಜಿ.ಎ.ರಮೇಶ್ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರಿನ ಎಸ್.ಮೂರ್ತಿ ಬಹುಮಾನ ವಿತರಣೆ ಮಾಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net