ರಾಜ್ಯ ಮಟ್ಟದ ಚಕ್ಕಡಿಗಾಡಿ ಓಟದ ಸ್ಪರ್ಧೆ ನಾಳೆ

12M.D.R.2
Published on

ಮದ್ದೂರು: ಬೆಸಗರಹಳ್ಳಿ ಗೌಡ್ರು ಬಾಯ್ಸ ವತಿಯಿಂದ ತಾಲೂಕಿನ ಬೆಸಗರಹಳ್ಳಿಯಲ್ಲಿ ಜೂ.14 ರಂದು ರಾಜ್ಯ ಮಟ್ಟದ ಚಕ್ಕಡಿಗಾಡಿ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಪ್ರೇಮ್ ತಿಳಿಸಿದರು.

ತಾಲೂಕಿನ ಬೆಸಗರಹಳ್ಳಿಯಲ್ಲಿ ಗುರುವಾರ ಓಟದ ಸ್ಪರ್ಧೆಯ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಚಕ್ಕಡಿಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಗ್ಗೆ 9 ರಿಂದ 10 ಗಂಟೆಯೊಳಗೆ ತಮ್ಮ ರಾಸುಗಳ ಮೂಲಕ ಪ್ರವೇಶ ಶುಲ್ಕ ಕಟ್ಟತಕ್ಕದ್ದು, ಒಂದು ಗಾಡಿ ಕಟ್ಟಲು 6 ರಿಂದ 8 ಜನರಿಗೆ ಮಾತ್ರ ಅವಕಾಶವಿರುತ್ತದೆ. ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ರಾಸುಗಳಿಗೆ, ಮಾಲೀಕರಿಗೆ ಹಾಗೂ ಪ್ರೇಕ್ಷಕರಿಗೆ ತೊಂದರೆಯಾದಲ್ಲಿ ಕಮಿಟಿಯವರು ಹೊಣೆಯಾಗುವುದಿಲ್ಲ. ಹಾಲ್ ಹಲ್ಲು ಮತ್ತು ಎರಡು ಹಲ್ಲು ಕರುಗಳಿಗೆ ಮಾತ್ರ ಅವಕಾಶವಿರುತ್ತದೆ. ಸುಮಾರು 50 ರಿಂದ 60 ಜೋಡಿ ರಾಸುಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ವಿವರಿಸಿದರು.

ಪ್ರಥಮ ಬಹುಮಾನ 40 ಸಾವಿರ ರೂ. ಟ್ರೋಫಿ, ದ್ವಿತೀಯ ಬಹುಮಾನ 30 ಸಾವಿರ ರೂ ಟ್ರೋಫಿ, ತೃತೀಯ ಬಹುಮಾನ 20 ಸಾವಿರ ರೂ.ಟ್ರೋಫಿ, ಚರ್ತುರ್ಥಿ ಬಹುಮಾನ 10 ಸಾವಿರ ರೂ. ಟ್ರೋಫಿ ಹಾಗೂ ಪಂಚಮ ಬಹುಮಾನ 5 ಸಾವಿರ ರೂ. ಟ್ರೋಫಿ ನೀಡಲಾಗುವುದು ಎಂದ ಅವರು, ಸ್ಪರ್ಧೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸ್ಪರ್ಧೆಯನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಖ್ಯಾತ ಚಲನ ಚಿತ್ರ ನಿರ್ದೇಶಕ ಜೋಗಿ ಪ್ರೇಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಹಾಗೂ ಮನ್‌ಮುಲ್ ನಿರ್ದೇಶಕ ಎಂ.ಕೆ.ಹರೀಶ್‌ಬಾಬು ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ಕಾರ್ಯಕ್ರಮದ ಆಯೋಜಕರಾದ ಅಕ್ಷಯ್, ಸುಮಂತ್, ಸುನೀಲ್, ಹರ್ಷ, ಟಿಎಪಿಸಿಎಂಎಸ್ ನಿರ್ದೇಶಕ ಗೋಪಿ, ಗ್ರಾಪಂ ಸದಸ್ಯ ಬಾಬು ಎಂ.ಆರ್.ಕಾಳೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಮಧು, ಮುಖಂಡ ಬಿ.ಎನ್.ಅಭಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net