ಜೂ.01 ರಂದು ರಾಜ್ಯ ಮಟ್ಟದ ವಧುವರರ ಸಮಾವೇಶ

CHANDRASHEKHAR MIJRJAPUR
CHANDRASHEKHAR MIJRJAPUR
Published on

ರಾಯಚೂರು ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶಿವ ಪಾರ್ವತಿ ಮ್ಯಾಟ್ರಿ ಮೋನಿಯಲ್ ಟ್ರಸ್ಟ್‌ಗಳ ವತಿಯಿಂದ ಜೂ,01 ರಂದು ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮೂರನೇ ರಾಜ್ಯ ಮಟ್ಟದ ವಧುವರರ ಸಮಾವೇಶ ಆಯೋಜಿಸಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯ ಎಲ್ಲ ಒಳ ಪಂಗಡಗಳ ವಧುವರರ ಸಮಾವೇಶ ನಡೆಸಲಾಗುತ್ತಿದ್ದು. ಸಮೂದಾಯ ಜನರು ಸದುಪಯೋಗ ಪಡೆಯಬೇಕೆಂದರು.

ನಂತರ ಶಿವ ಪಾರ್ವತಿ ಮ್ಯಾಟ್ರಿಮೋನಿಯಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಕ್ಕೇರಿ ಮಾತನಾಡಿ, ಜೂ.1 ರಂದು ಕಲಬುರಗಿಯಲ್ಲಿ ನಡೆಯಲಿರುವ ವಧುವರರ ಸಮಾವೇಶವನ್ನು ಶರಣಬಸವೇಶ್ವರ ಸಂಸ್ಥಾನ 9 ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಉದ್ಘಾಟಿಸಲಿದ್ದಾರೆ. ಸಾನಿಧ್ಯವನ್ನು ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹಾಗೂ ದ್ರಾಕ್ಷಾಯಣಿ ಎ.ಸ್.ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸ್ಥಾನ ಕಾರ್ಯದರ್ಶಿ ಬಸವರಾಜ ದೇಶಮುಖ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣಕುಮಾರ ಮೋದಿ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ವಧುವರರು ಕಡ್ಡಾಯವಾಗಿ ಹಾಜರಿರಬೇಕು, ವಧುವರರ ಇಬ್ಬರಿಗೆ ಮಾತ್ರ ಅವಕಾಶವಿದೆ. ಸ್ವ ವಿವರ, ಭಾವಚಿತ್ರಗಳನ್ನು ನೀಡಬೇಕು. ನೇರವಾಗಿಯೂ ನೊಂದಣಿ ಮಾಡಿಕೊಳ್ಳಬೇಕು. ಮೇ.30 ರೊಳಗೆ ನೊಂದಣಿ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ದಾನಮ್ಮ ,ಚನ್ನವೀರಪ್ಪ, ವೀರುಪಾಕ್ಷಪ್ಪ, ಗುರುಪಾದಪ್ಪ ಪಲ್ಲಕ್ಕಿ, ಕಲ್ಯಾಣರಾವ್ ಯಲಮಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net