ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ 15ರಂದು

GKN Zim
Published on

ಗೋಕರ್ಣ: ಇಲ್ಲಿನ ಶಿವಾ ಮಲ್ಟಿ ಜಿಮ್ ವ್ಯಾಯಾಮ ಶಾಲೆ ವತಿಯಿಂದ ರಾಜ್ಯ ಮಟ್ಟದ ಮಲ್ಟಿ ಜಿಮ್ ದೇಹದಾರ್ಢ್ಯ ಸ್ಪರ್ಧೆ ‘ಮಿಸ್ಟರ್ ಮಹಾಬಲ-2025’ ಮಾ.15ರಂದು ನಡೆಯಲಿದೆ.

ಸಮುದ್ರ ತೀರದ ವಿಶೇಷ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಎಸ್ಪಿ ಎಂ. ನಾರಾಯಣ, ಹಿರಿಯ ಪ್ರರ್ತಕರ್ತ ಗಂಗಾಧರ ಹಿರೇಗುತ್ತಿ, ಬೆಳಕು ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ, ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ ಇತರರು ಪಾಲ್ಗೊಳ್ಳುವರು. ಸ್ಪರ್ಧೆ ನಿಮಿತ್ತ ಪ್ರಖ್ಯಾತ ಕಲಾವಿದರ ಬಳಗದಿಂದ ಆಕರ್ಷಕ ’ಡಾನ್ಸ್ ಧಮಾಕಾ’ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net