ಡಿಸೆಂಬರ್ 10 ಕ್ಕೆ ದಾವಣಗೆರೆಯಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ

body bilding
Published on

ದಾವಣಗೆರೆ: ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಡಿ.10 ರಂದು ಕರ್ನಾಟಕ ಸಿರಿ-2023 ರಾಜ್ಯಮಟ್ಟದ ತೂಕ ವಿಭಾಗದ ದೇಹದಾರ್ಢ್ಯ ಹಾಗೂ ಮೆನ್ಸ್ ಫಿಸಿಕ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಸಹಕಾರದೊಂದಿಗೆ 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಒಂದೊಂದು ವಿಭಾಗದಲ್ಲಿ 5 ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. 3 ಲಕ್ಷ ರೂ. ಬಹುಮಾನ ಮೊತ್ತ ಹಂಚಿಕೆ ಮಾಡಲಾಗುವುದು.

ಬಾಡಿ ಬಿಲ್ಡಿಂಗ್‌ನಲ್ಲಿ ಮೂರು ಟೈಟಲ್ ವಿಜೇತರಿಗೆ ಕರ್ನಾಟಕ ಸಿರಿ, ಎಸ್‌ಎಸ್‌ಎಂ ಕ್ಲಾಸಿಕ್, ಪಪ್ಪೀಸ್ ಕ್ಲಾಸಿಕ್ ಹಾಗೂ ಮೆನ್ಸ್ ಫಿಸಿಕ್ ಸ್ಪರ್ಧೆ ವಿಜೇತರಿಗೆ ಶ್ವಾನಿಕ್ ಶ್ರೀ ಕ್ಲಾಸಿಕ್ ಅವಾರ್ಡ್ ನೀಡಲಾಗುವುದು.

ರಾಜ್ಯದ ವಿವಿಧ ಜಿಲ್ಲೆಗಳಿಂದ 150 ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಸ್ಪರ್ಧೆಯ ಆಯೋಜಕರಾದ ಸಂತೋಷ್ ಹಾಗೂ ಶಿವರತನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net