ಅಕ್ಷತಾ ಕೃಷ್ಣಮೂರ್ತಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

Akshatha Krishnamurthy
Published on

ಅಂಕೋಲಾ: 2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಂಕೋಲಾ ಮೂಲದ, ಜೊಯಿಡಾ ತಾಲೂಕಿನ ಅಣಶಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಭಾಜನರಾಗಿದ್ದಾರೆ.

ತಾಲೂಕಿನ ಬೇಲೇಕೇರಿಯವರಾದ ಅಕ್ಷತಾ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಾವು ಕಲಿಸುವ ಪಾಠದ ಜತೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ವಿಶೇಷ ಲೇಖನ ಬರೆಯುವ ಹವ್ಯಾಸ ಹೊಂದಿದ್ದು, ಆಕಾಶವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕನ್ನಡ ಪಾಕ್ಷಿಕ ಪತ್ರಿಕೆಯೊಂದರಲ್ಲಿ ಬರೆದ ಇಸ್ಕೂಲ್ ಅಂಕಣ ಪ್ರಸಿದ್ಧವಾಗಿದೆ. ಕಳೆದ 12 ವರ್ಷಗಳಿಂದ ಗಾಂವಕರ ಮೆಮೋರಿಯಲ್ ಫೌಂಡೇಷನ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ.
ಅಂಕೋಲಾ ತಾಲೂಕಿನ ಹೆಸರನ್ನು ರಾಜ್ಯಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸಾಹಿತ್ಯಲೋಕದಲ್ಲಿ 11 ಕೃತಿ ರಚಿಸಿದ್ದು, ಇವರು ಬರೆದ ಅಬೋಲಿ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಅಳವಡಿಸಿಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net