ಸೆ.30 - ಅ.1 ರಂದು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

24SND-04
Published on

ಸಿಂಧನೂರು: ನಗರದ ಮಸ್ಕಿ ರಸ್ತೆ ಮಾರ್ಗದಲ್ಲಿರುವ ಎಫ್‌ಆರ್‌ಸಿಎಸ್ ಕ್ಲಬ್‌ನಲ್ಲಿ ಸೆ.30 ಹಾಗೂ ಅ.1 ರಂದು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆಂದು ಕ್ಲಬ್ ಅಧ್ಯಕ್ಷ ಸಿ.ಟಿ.ಪಾಟೀಲ್ ತಿಳಿಸಿದರು.

ನಗರದ ಹಳೆ ಟೆನ್ನಿಸ್‌ಕೋರ್ಟ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ವರ್ಷಗಳಲ್ಲಿ ರಾಜ್ಯ, ಅಂತರ್ ಜಿಲ್ಲಾ ವಲಯ ಮಟ್ಟದ ಟೆನ್ನಿಸ್ ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಿಕೊಡಲಾಗಿದೆ.

ಈಗ ಬ್ಯಾಡ್ಮಿಂಟನ್ ಆಟಗಾರ ದಿ.ಮಹೇಶ ಪರ್ಯಾನಿ ಸ್ಮರಣಾರ್ಥ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ. ಎರಡು ದಿನ ನಡೆಯುವ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಒಪನ್ ಡಬಲ್ಸ್ ಮೊದಲ ಬಹುಮಾನ 30,000 ರೂ., ದ್ವಿತೀಯ ಬಹುಮಾನ 20,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ನಾಲ್ಕನೇ ಬಹುಮಾನ ಟ್ರೋಪಿ ಇಡಲಾಗಿದೆ ಎಂದರು.

ಒಪನ್ ಸಿಂಗಲ್ಸ್‌ನಲ್ಲಿ ಮೊದಲ ಬಹುಮಾನ 25,000 ರೂ., ದ್ವಿತೀಯ ಬಹುಮಾನ 15,000 ರೂ., ತೃತೀಯ ಬಹುಮಾನ 10,000 ರೂ. ಹಾಗೂ ನಾಲ್ಕನೇ ಬಹುಮಾನ ಒಂದು ಟ್ರೋಪಿ ಇದೆ.

40 ಪ್ಲಸ್ ಹಾಗೂ 75 ಪ್ಲಸ್ ವಯಸ್ಸಿನವರಿಗೆ ಮೊದಲ ಬಹುಮಾನ 15,000 ರೂ., ದ್ವಿತೀಯ ಬಹುಮಾನ 10,000 ರೂ., ತೃತೀಯ ಬಹುಮಾನ 5,000 ರೂ. ಹಾಗೂ ಟ್ರೋಪಿ ಒಳಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ 9900643697 ಅಥವಾ 7760007999 ಗೆ ಸಂಪರ್ಕಿಸಬಹುದಾಗಿದೆಂದು ತಿಳಿಸಿದರು. ಎಫ್‌ಆರ್‌ಸಿಎಸ್ ಕ್ಲಬ್ ಉಪಾಧ್ಯಕ್ಷ ಶೇಖ್‌ಸಾಬ ಮುಳ್ಳೂರು, ಕ್ಲಬ್ ಸದಸ್ಯ ಆರ್.ಸಿ.ಪಾಟೀಲ್, ವಿನೋದಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net