ಕಿಟೆಲ್​ ಕಾಲೇಜಿಗೆ ರಾಜ್ಯ ಮಟ್ಟದ ಪ್ರಶಸ್ತಿ

18 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಎನ್​ಎಸ್​ಎಸ್​ ಕೋಶ ವತಿಯಿಂದ ರಾಜಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಧಾರವಾಡ ಕಿಟೆಲ್​ ಕಲಾ ಕಾಲೇಜಿಗೆ ಉತ್ಕೃಷ್ಟ್ ಎನ್​ಎಸ್​ಎಸ್​ ಘಟಕ ಪ್ರಶಸ್ತಿ ನೀಡಲಾಯಿತು.

2022-23ನೇ ಸಾಲಿನ ಉತ್ಕೃಷ್ಟ ಎನ್​ಎಸ್​ಎಸ್​ ಘಟಕ ಪ್ರಶಸ್ತಿಯನ್ನು ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಅವರು ಕಿಟೆಲ್​ ಕಲಾ ಕಾಲೇಜಿನ ಪ್ರಾಚಾರ್ಯೆ ಡಾ. ರೇಖಾ ಜೋಗುಳ ಅವರಿಗೆ ಪ್ರದಾನ ಮಾಡಿದರು. ಜತೆಗೆ ಕಾಲೇಜಿನ ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ಡಾ. ಸುರೇಶ ನ್ಯಾಮತಿ ಅವರಿಗೆ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್​ ಡಿ, ಇಲಾಖೆ ಆಯುಕ್ತ ಚೇತನ ಆರ್​., ರಾಜ್ಯ ಎನ್​ಎಸ್​ಎಸ್​ ಅಧಿಕಾರಿ ಪ್ರತಾಪ ಲಿಂಗಯ್ಯ, ಎನ್​ಎಸ್​ಎಸ್​ ಪ್ರಾದೇಶಿಕ ನಿರ್ದೇಶಕ ಕಾತಿರ್ಕೆಯನ್​ ಡಿ., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net