ಹುಳಗೋಳ ಸೊಸೈಟಿಗೆ ರಾಜ್ಯ ಮಟ್ಟದ ಪ್ರಶಸ್ತಿ

21sirsi4
Published on

ಶಿರಸಿ: ಅಂತಾರಾಷ್ಟ್ರೀಯ ಸಹಕಾರ ವರ್ಷ 2025 ಮತ್ತು 44ನೇ ನಬಾರ್ಡ್ ಸ್ಥಾಪನಾ ದಿವಸದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಕೃಷಿ ಪದ್ಧತಿಯಿಂದ ರಾಷ್ಟ್ರದ ಅಭಿವೃದ್ಧಿಗೆ ಕಾರಣೀಕೃತರಾದ ಸಹಕಾರ ಕ್ಷೇತ್ರದ ಪ್ರಾಥಮಿಕ ಸಂಘಗಳ ವಿಭಾಗದಲ್ಲಿ ಹಣಕಾಸೇತರ ಚಟುವಟಿಕೆಗಾಗಿ ಹುಳಗೋಳ ಪ್ರಾಥಮಿಕ ಸಹಕಾರಿ ಸಂಘ ಭೈರುಂಬೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.

ಇತ್ತೀಚೆಗೆ ಬೆಂಗಳೂರಿನ ನಬಾರ್ಡ್ ಮುಖ್ಯ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ನಬಾರ್ಡ್ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಂದ್ರ ಬಾಬು, ಆರ್‌ಬಿಐ ರೀಜನಲ್ ಡೈರೆಕ್ಟರ್ ಸುಶಾಲಿ ಸಿಂಗ್ ಗುಪ್ತಾ, ಭವಿಂದ್ರ ಕುಮಾರ ಇತರರು ಉಪಸ್ಥಿರರಿದ್ದರು.

ಸಂಘದ ಪರವಾಗಿ ಉಪಾಧ್ಯಕ್ಷ ಆರ್.ಎಸ್. ಭಟ್ಟ ನಿಡಗೋಡು, ಮುಖ್ಯಕಾರ್ಯನಿರ್ವಾಹಕ ಜಿ.ಎಂ. ಹೆಗಡೆ ಮಾತ್ನಳ್ಳಿ ಮತ್ತು ಕೆಡಿಸಿಸಿ ಬ್ಯಾಂಕ್ ಹಿರಿಯ ಅಧಿಕಾರಿ ಪಿ. ಜಿ. ದೀಕ್ಷಿತ ಅವರು ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net