8ರಂದು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ

6 skpp 3
ರಂಗಕರ್ಮಿ ರಕ್ಷಿದಿ ಪ್ರಸಾದ್
Published on

ಸಕಲೇಶಪುರ: ಬೆಳ್ಳೇಕೆರೆಯ ಜೈಕರ್ನಾಟಕ ಸಂಘದಿಂದ ಎಸ್.ಕೆ ಕರೀಂಖಾನ್ ಹಾಗೂ ಅಮೃತ ಕಾವ್ಯ ಪ್ರಶಸ್ತಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ.8ರಂದು ತಾಲೂಕಿನ ರಕ್ಷಿದಿ ಗ್ರಾಮದ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಕರ್ಮಿ ರಕ್ಷಿದಿ ಪ್ರಸಾದ್ ಹೇಳಿದರು.

ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರತಿಭಾನ್ವಿತರಿಗೆ ಪ್ರತಿ ವರ್ಷ ನೀಡಲಾಗುವ ಎಸ್.ಕೆ ಕರೀಂಖಾನ್ ಪ್ರಶಸ್ತಿ 10 ಸಾವಿರ ರೂ.ನಗದು ಒಳಗೊಂಡಿರಲಿದೆ. ಯುವ ಸಾಹಿತಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಅಮೃತ ಕಲಾ ಪ್ರಶಸ್ತಿ ಐದು ಸಾವಿರ ರೂ. ನಗದು ಒಳಗೊಂಡಿರಲಿದೆ. ಪ್ರಶಸ್ತಿ ಆಯ್ಕೆ ಸಮಿತಿ ನಿರ್ದೇಶನದಂತೆ ಈ ಬಾರಿ ಎಸ್.ಕೆ. ಕರೀಂಖಾನ್ ಪ್ರಶಸ್ತಿ ಜನಪರ ನಿಲುವಿನೊಂದಿಗೆ ರಂಗಕಾಯಕ ನಡೆಸುತ್ತಿರುವ ಹರಪನಹಳ್ಳಿ ತಾಲೂಕಿನ ಬಿ.ಪರಶುರಾಮ್ ಅವರಿಗೆ ನೀಡಲಾಗುತ್ತಿದ್ದರೆ, ತಿಪಟೂರಿನ ಸಂಘಮಿತ್ರೆ ನಾಗರಘಟ್ಟ ಹಾಗೂ ಹೊಸಪೇಟೆಯ ಯುವ ಕಥೆಗಾರ ವಿಠಾಲ್ ಮ್ಯಾನರ್ ಅವರಿಗೆ ಅಮೃತ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಪತ್ರಕರ್ತ ರಘುನಾಥ್, ರಂಗಾಯಣ ಕರಾವಳಿ ನಿರ್ದೇಶಕ ವೆಂಕಟರಮಣ ಐತಾಳ್, ರಂಗಕರ್ಮಿ ಎಚ್.ಆರ್ ಸ್ವಾಮಿ ಸೇರಿದಂತೆ ಹಲವರು ಬಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜಶೇಖರ್, ರಾಧೆ ರಕ್ಷಿದಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net