ಪರಿಷತ್ ಚುನಾವಣೆಗೆ ಬಿಜೆಪಿ ಪಟ್ಟಿ ಬಿಡುಗಡೆ: ಮೇಲುಗೈ ಸಾಧಿಸಿದ ಸಿಎಂ ಬಿಎಸ್​ವೈ

BSY
Published on

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರತಾಪ್ ಸಿಂಹ್ ನಾಯಕ್, ಮಾಜಿ ಸಚಿವ ಎಂಟಿಬಿ ನಾಗರಾಜ್​, ಆರ್.ಶಂಕರ್ ಹಾಗೂ ಸುನೀಲ್ ವಲ್ಯಾಪುರೆ ಅವರಿಗೆ ಪರಿಷತ್​ ಚುನಾವಣೆ ಟಿಕೆಟ್​ ಘೋಷಣೆಯಾಗಿದೆ. ಇದನ್ನೂ ಓದಿ: ಇದು ಯುದ್ಧ ಮಾಡುವ ಹೊತ್ತಲ್ಲ

ಸುನೀಲ್ ವಲ್ಯಾಪುರೆಗೆ ಪರಿಷತ್ ಟಿಕೆಟ್ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದರು. ಕೊಟ್ಟ ಮಾತಿನಂತೆ ಟಿಕೆಟ್ ಘೋಷಣೆ ಮಾಡುವಲ್ಲಿ ಬಿಎಸ್​ವೈ ಯಶಸ್ವಿಯಾಗಿದ್ದಾರೆ.

ಇನ್ನು ಕಾಂಗ್ರೆಸ್​ನಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸೋತಿದ್ದ ಎಂಟಿಬಿ ನಾಗರಾಜ್​ ಅವರಿಗೂ ಟಿಕೆಟ್​ ದೊರಕಿದ್ದು, ಜೆಡಿಎಸ್​ನಿಂದ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆ ಸೋತಿದ್ದ ಎಚ್​.ವಿಶ್ವನಾಥ್​ ಅವರಿಗೆ ಈ ಬಾರಿಯು ಲಕ್​ ಕೈಕೊಟ್ಟಿದೆ. ಇದನ್ನೂ ಓದಿ: ಮಹೇಶ್ ಎದುರು ಕನ್ನಡ ಸ್ಟಾರ್: ​ಪ್ರಿನ್ಸ್ ಜತೆ ನಟಿಸಲಿರುವ ನಟ ಯಾರು?

ಪರಿಷತ್ ಟಿಕೆಟ್ ಘೋಷಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮೇಲುಗೈ ಸಾಧಿಸಿದ್ದು, ಬಿಎಸ್​ವೈ ಹೇಳಿದ ವ್ಯಕ್ತಿಗಳಿಗೆ ಹೈಕಮಾಂಡ್​ ಟಿಕೆಟ್ ನೀಡಿದೆ. ಎಂಟಿಬಿ, ಆರ್.ಶಂಕರ್ ಹಾಗೂ ಸುನೀಲ್ ವಲ್ಯಾಪುರೆ ಬಿಎಸ್​ವೈ ಸೂಚಿಸಿದ ಹೆಸರುಗಳಾಗಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net