ಕೆರೂರ ಆಸ್ಪತ್ರೆಗೆ ರಾಜ್ಯ ಕಾಯಕಲ್ಪ ತಂಡ ಭೇಟಿ

kerur 29-2 tanda
ಕೆರೂರ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ವೈದ್ಯರ ಕಾಯಕಲ್ಪ ತಂಡ ಭೇಟಿ ನೀಡಿ ಪರಿಶೀಲಿಸಿತು. ಬೆಳಗಾವಿ ಬಿಮ್ಸ್ ಮೆಡಿಕಲ್ ಕಾಲೇಜಿನ ಪ್ರೊೆಸರ್ ಪಂಕಜ್‌ಕುಮಾರ್ ಮಸಾರೆ, ಗದಗದ ಟಿ.ಎಚ್.ಒ ಪೀರ್ಥ ಕೋಣಾ, ಈರಣ್ಣ ಬಾಡಗಂಡಿ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕಿರಣ ಕುಳಗೇರಿ, ದಂತ ವೈದ್ಯೆ ಸವಿತಾ ಶೆಟ್ಟರ ಇತರರಿದ್ದರು.
Published on

ಕೆರೂರ: ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ರಾಜ್ಯ ಕಾಯಕಲ್ಪ ಬಾಹ್ಯ ಮೌಲ್ಯಮಾಪನ ಸಮಿತಿ ತಂಡ ಭೇಟಿ ನೀಡಿ ಆಸ್ಪತ್ರೆ ಸ್ವಚ್ಛತೆ ಮತ್ತು ವೈದ್ಯಕೀಯ ಸುಧಾರಣೆಗಳ ಸೌಲಭ್ಯ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ತಂಡದ ಮೂವರು ವೈದ್ಯರು ಆಸ್ಪತ್ರೆಯಲ್ಲಿನ ರೋಗಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿತು.

ಕಾಯಕಲ್ಪ ಯೋಜನೆಯು ಮೂಲಸೌಕರ್ಯ ನಿರ್ವಹಣೆ, ನೈರ್ಮಲ್ಯ, ಜೈವಿಕ-ವೈದ್ಯಕೀಯ ತ್ಯಾಜ್ಯದ ಸರಿಯಾದ ವಿಲೇವಾರಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕು ನಿಯಂತ್ರಣ ಅಭ್ಯಾಸಗಳನ್ನು ಒಳಗೊಂಡಿದೆ.

ಬೆಳಗಾವಿ ಬಿಮ್ಸ್ ಮೆಡಿಕಲ್ ಕಾಲೇಜಿನ ಪ್ರೊೆಸರ್ ಪಂಕಜ್‌ಕುಮಾರ್ ಮಸಾರೆ, ಗದಗದ ಟಿ.ಎಚ್.ಒ ಪೀರ್ಥ ಕೋಣಾ, ಈರಣ್ಣ ಬಾಡಗಂಡಿ ಅವರ ತಂಡ ಚಿಕಿತ್ಸೆ, ಪರೀಕ್ಷೆ, ರೋಗಿಗಳ ಆರೈಕೆಯ ನಿರ್ವಹಣೆ ಸೇರಿ ಎಲ್ಲ ಸೌಲಭ್ಯಗಳನ್ನು ಪರಿಶೀಲಿಸಿತು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕಿರಣ ಕುಳಗೇರಿ, ದಂತ ವೈದ್ಯೆ ಸವಿತಾ ಶೆಟ್ಟರ, ವೈದ್ಯ ಶ್ರೀಧರ ಪತ್ತಾರ, ಡಾ. ತೊಹಿದ ಖಾಜಿ, ಡಾ. ಶಿವಪ್ಪ ನಾಯಕ, ಧಿರೇಂದ್ರ ಕುಲಕರ್ಣಿ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net