ಬಿಮ್ಸ್ , ಜಿಲ್ಲಾಸ್ಪತ್ರೆಗೆ‌ ರಾಜ್ಯ ಜೆಡಿಎಸ್ ನಿಯೋಗ ಭೇಟಿ

Published on

ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆ ‌ಹಾಗೂ ಬಿಮ್ಸ್ ಗೆ ರಾಜ್ಯ ಜೆಡಿಎಸ್ ನಿಯೋಗವು ಬುಧವಾರ ಭೇಟಿ‌ ನೀಡಿ ಬಾಣಂತಿಯರ ಸಾವಿನ ಬಗ್ಗೆ ಪರಿಶೀಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಮಾತನಾಡಿ,

ಬಾಣಂತಿಯರ ಸಾವಿಗೆ ವೈದ್ಯರು ಹಾಗೂ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.‌ ಸರ್ಕಾರದ ಕಳಪೆ ಔಷಧಿಯಿಂದ ನಾಲ್ಕು ಬಾಣಂತಿಯರು ಮೃತಪಟ್ಟರು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಬರದೇ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಕಳಪೆ ಔಷಧಿಯಿಂದ ಸಾವಾಗಿದೆ ಎನ್ನಲಾಗುತ್ತಿದೆ. ಕಳಪೆ ಕಂಪನಿಗೆ ಔಷಧಿ ಸರಬರಾಜಿಗೆ ಅವಕಾಶ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು. ಬಡ ಬಾಣಂತಿಯರ ಸಾವಿನ ಬಗ್ಗೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ. ತಾಯಿ ಕಳೆದುಕೊಂಡ ಮಕ್ಕಳ ‘ವಿಷಯಕ್ಕೆ ಸರ್ಕಾರ ಕನಿಷ್ಠ 25 ಲಕ್ಷ ರೂ., ಪರಿಹಾರ ನೀಡಬೇಕು. ಬಳ್ಳಾರಿ ಮಾತ್ರವಲ್ಲ ಸಿಂಧನೂರು ಸೇರಿದಂತೆ ಹಲವೆಡೆ ಬಾಣಂತಿಯರ ಸಾವಾಗಿದೆ. ಇದೇ ಗ್ಲೋಕಸ್‌ನಿಂದ ರಾಜ್ಯದ ವಿವಿಧ ಆಸ್ಪತ್ರೆಯಲ್ಲಿ ಸಾವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಬಾಣಂತಿಯರ ಸಾವಿನ ಪ್ರಕರಣವನ್ನು ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಹಾಗೂ ಐಸಿಯು ವಾರ್ಡ್ ಪರಿಶೀಲಿಸಿ, ಬಾಣಂತಿಯರ ಸಾವಿನ ಪ್ರಕರಣ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಜತೆ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net