

ಚಿಂಚೋಳಿ : ಮತಕ್ಷೇತ್ರದ ಕೋಡ್ಲಿ ಕ್ರಾಸ್ ಬಳಿ ಚಿಂಚೋಳಿ ರಾಜ್ಯ ಹೆದ್ದಾರಿಯ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಹಿನ್ನೆಲೆ ರಸ್ತೆಯ ಉದ್ದಗಲಕ್ಕೂ ತಗ್ಗು ಗುಂಡಿಗಳು ಬಿದ್ದು, ಸಣ್ಣ ಹೊಳೆಯಂತಾಗಿದ್ದು, ವಾಹನ ಸವಾರರ ಪಾಡು ಹೇಳತೀರದು ನಿತ್ಯವೂ ಅಧಿಕಾರಿಗಳೂ, ಚುನಾಯಿತ ಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ಸಂಚರಿಸುವಂತಾಗಿದೆ.
ದ್ವಿಚಕ್ರ ವಾಹನ ಸವಾರರು ಆಯಾ ತಪ್ಪಿ ಗುಂಡಿಯಲ್ಲಿ ಬಿದ್ದ ಪ್ರಸಂಗ ಜರುಗಿದೆ. ಇತ್ತಿಚೆಗೆ ಕಾಳಗಿಯಲ್ಲಿ ಜರುಗಿದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡಿದರು. ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಗ್ಗು ಗುಂಡಿಗಳು ಮುಚ್ಚುವ ಕಾರ್ಯ ಮಾಡಬೇಕು. ಎಂಬುದೇ ಗ್ರಾಮಸ್ಥರ ಆಗ್ರಹವಾಗಿದೆ.