

ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ಸೋಂಕು ನಿವಾರಣೆಗೆ ಜಿಲ್ಲೆಗಳಲ್ಲಿ ಇದ್ದು ಜಿಲ್ಲಾಡಳಿತದೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಬೆಂಗಳೂರು ನಗರದ ಉಸ್ತುವಾಗಿರಿಯನ್ನೇ ಯಡಿಯೂರಪ್ಪ ಅವರೇ ವಹಿಸಿಕೊಂಡಿದ್ದು, ಕೆಲ ಸಚಿವರಿಗೆ ಹಿಂದೆ ಇದ್ದಂತೆ ಎರಡು ಜಿಲ್ಲೆಗಳ ಉಸ್ತುವಾರಿ ಮುಂದುವರಿಸಿದ್ದಾರೆ. ಕೆಲವರನ್ನು ಬದಲಿಸಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.
ಮಂಡ್ಯ ಜಿಲ್ಲೆ ಉಸ್ತುವಾರಿಯನ್ನು ಆರ್. ಅಶೋಕ್ ಬದಲಿಗೆ ನಾರಾಯಣಗೌಡ ಅವರಿಗೆ ನೀಡಲಾಗಿದೆ. ಸೋಮಣ್ಣ ಅವರನ್ನು ಕೇವಲ ಕೊಡಗಿಗೆ ಸೀಮಿತ ಮಾಡಿ ಎಸ್.ಟಿ.ಸೋಮಶೇಖರ್ ಅವರಿಗೆ ಮೈಸೂರಿನ ಹೊಣೆ ವಹಿಸಲಾಗಿದೆ. ಶಶಿಕಲಾ ಜೊಲ್ಲೆ ಅವರನ್ನು ಉತ್ತರ ಕನ್ನಡದಿಂದ ವಿಜಯಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಅಶ್ವತ್ಥನಾರಾಯಣ್ ಹಾಗೂ ಸುಧಾಕರ್ ನಡುವೆ ಉಸ್ತುವಾರಿಗೆ ನಡೆದಿದ್ದ ಜಿದ್ದಾಜಿದ್ದಿಗೆ ಕೊನೆಗಾಣಿಸಲಾಗಿದೆ. ಲಕ್ಷ್ಮಣ ಸವದಿ ಹಿಡಿತದಲ್ಲಿದ್ದ ಬಳ್ಳಾರಿಯ ಉಸ್ತುವಾರಿಯನ್ನು ಆನಂದಸಿಂಗ್ ಅವರಿಗೆ ನೀಡಲಾಗಿದೆ.
ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದವರ ಪೈಕಿ ರಮೇಶ್ ಜಾರಕಿಹೊಳಿ, ಗೋಪಾಲಯ್ಯ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ:
ಬಿ.ಎಸ್.ಯಡಿಯೂರಪ್ಪ-ಬೆಂಗಳೂರು
ಡಾ.ಸಿ.ಎನ್.ಅಶ್ವತ್ಥನಾರಾಯಣ- ರಾಮನಗರ
ಲಕ್ಷ್ಮಣ ಸವದಿ- ರಾಯಚೂರು
ಗೋವಿಂದ ಕಾರಜೋಳ-ಬಾಗಲಕೋಟೆ, ಕಲಬುರಗಿ
ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ
ಆರ್.ಅಶೋಕ್- ಬೆಂಗಳೂರು ಗ್ರಾಮಾಂತರ
ಜಗದೀಶ ಶೆಟ್ಟರ್- ಬೆಳಗಾವಿ, ಧಾರವಾಡ
ಬಿ.ಶ್ರೀರಾಮುಲು- ಚಿತ್ರದುರ್ಗ
ಎಸ್. ಸುರೇಶ್‌ಕುಮಾರ್- ಚಾಮರಾಜನಗರ
ವಿ.ಸೋಮಣ್ಣ- ಕೊಡಗು
ಸಿ.ಟಿ.ರವಿ- ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ- ಹಾವೇರಿ, ಉಡುಪಿ
ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ
ಜೆ.ಸಿ. ಮಾಧುಸ್ವಾಮಿ- ತುಮಕೂರು, ಹಾಸನ
ಸಿ.ಸಿ. ಪಾಟೀಲ್-ಗದಗ
ಎಸ್. ನಾಗೇಶ್- ಕೋಲಾರ
ಪ್ರಭು ಚವ್ಹಾಣ್- ಬೀದರ್, ಯಾದಗಿರಿ
ಶಶಿಕಲಾ ಜೊಲ್ಲೆ- ವಿಜಯಪುರ
ಶಿವರಾಮ ಹೆಬ್ಬಾರ್- ಉತ್ತರ ಕನ್ನಡ
ಎಸ್.ಟಿ. ಸೋಮಶೇಖರ್- ಮೈಸೂರು
ಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರ
ಕೆ.ಸಿ. ನಾರಾಯಣಗೌಡ- ಮಂಡ್ಯ
ಆನಂದಸಿಂಗ್- ಬಳ್ಳಾರಿ
ಬಿ.ಎ. ಬಸವರಾಜು- ದಾವಣಗೆರೆ
ಬಿ.ಸಿ. ಪಾಟೀಲ್- ಕೊಪ್ಪಳ