ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡುತ್ತಿದೆ- ಆರೋಪ

raichur
raichur
Published on

ರಾಯಚೂರು ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕೀಯ ಮಾಡುತ್ತಿದ್ದು, ದೇಶದ್ರೋಹಿ ಶಕ್ತಿಗಳಿಗೆ ಬೆಂಬಲಿಸುವ ಮೂಲಕ ಅಧಿಕಾರ ದುರುಪಯೋಗ ಮಾಡುತ್ತಿದೆಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯದಲ್ಲಿ ಗೆಲುವುಸಾಧಿಸಿದ ಆರ್‌ಸಿಬಿ ತಂಡಕ್ಕೆ ಸನ್ಮಾನ ಮಾಡುವ ನೆಪದಲ್ಲಿ ಪೂರ್ವ ಸಿದ್ದತೆಯಲ್ಲಿದೆ ಕಾರ್ಯಕ್ರಮ ರೂಪಿಸಿ 11 ಜನರ ಸಾವಿಗೆ ಕಾರಣವಾಗಿದೆ. ಪ್ರಯಾಗರಾಜ್‌ನಲ್ಲಿ ಕಾಲ್ತುಳಿದಿಂದ ಸಾವಿಗೀಡಾದ ಘಟನೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ನಾಯಕರು ಈಗ ಯಾರ ವೈಫಲ್ಯವೆಂದು ಹೇಳಬೇಕು ಎಂದರು.

ಪ್ರಚೋದನಾತ್ಮಕ ಭಾಷಣೆ ಹೆಸರಿನಲ್ಲಿ ಬಿಜೆಪಿಯವರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಆದರೆ ಪಾಕಿಸ್ತಾನಕ್ಕೆ ಜೈ ಅಂದವರನ್ನು ಪಕ್ಕದಲ್ಲಿಟ್ಟುಕೊಂಡು ಧರ್ಮ ನಿರಪೇಕ್ಷದ ಮಾತುಗಳನ್ನಾಡುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯನ್ನು ಮುಚ್ಚಿ ಹಾಕುವದ ಮೂಲಕ ಕಾಂಗ್ರೆಸ್ ಇನ್ನೊಂದು ಮುಖ ಬಯಲಾಗಿದೆ.

ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಬಿಜೆಪಿಯವರು ಸಂವಿಧಾನ ವಿರೋಧಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು ಛಲವಾದಿ ನಾರಾಯಣಸ್ವಾಮಿ, ಎನ್,ರವಿಕುಮಾರ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ ಕಲಬುರಗಿಯಲ್ಲಿ ಪಾಕಿಸ್ತಾನದ ಧ್ವಜ ತುಳಿದವರ ಮೇಲೆ ಕೇಸ್ ಹಾಕುವ ಪೊಲೀಸರು ಸಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಬಿಜೆಪಿ ಕಾರ್ಯಕರ್ತರ ವಿರುದ್ದ ಕೇಸ್ ದಾಖಲಾಗುತ್ತಿದೆಂದು ಆರೋಪಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವುಕುಮಾರ ಮಧ್ಯೆ ನಡೆದ ಮುಸುಕಿನ ಗುದ್ದಾಟದಂತೆ ಜಿಲ್ಲೆಯಲ್ಲಿಯೂ ಎನ್.ಎಸ್.ಬೋಸರಾಜ, ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಧ್ಯ ಮುಸುಕಿನ ಗುದ್ದಾಟ ನಡೆದಿದ್ದು, ಇದಕ್ಕೆ ಜನರು ತಕ್ಕ ಪಾಠಕಲಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಿ.ಶಂಕರರೆಡ್ಡಿ, ರವೀಂದ್ರ ಜಲ್ದಾರ, ಮಲ್ಲಿಕಾರ್ಜುನ ಹಳ್ಳೂರು, ಜೆ.ಪಿ.ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net