ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಚಳವಳಿ

Published on

ಮುದ್ದೇಬಿಹಾಳ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ಡಿ.14 ರಂದು ಎಲ್ಲ ಶಾಸಕರ ಮನೆಗಳ ಮುಂದೆ ತಮಟೆ ಚಳವಳಿ, ಡಿ.16ರಂದು ಬೆಳಗಾವಿಯಲ್ಲಿ ಒಳಮೀಸಲಾತಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಜಿಲ್ಲಾ ದೌರ್ಜನ್ಯ ನಿವಾರಣಾ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಸಿದ್ದಾಪೂರ, ಬಿಜೆಪಿ ಐಟಿ ಸೆಲ್‌ನ ರಾಜ್ಯ ಸಂಚಾಲಕ ಮಂಜುನಾಥ ಚಲವಾದಿ, ಭೀಮರಾಯ ಹುಲ್ಲೂರ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸಬೇಕು. ಕಾಲಹರಣದ ಆಯೋಗ ರಚಿಸದೆ ನಮ್ಮ ಹಕ್ಕೊತ್ತಾಯದ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು. ಹರ್ಯಾಣದಲ್ಲಿರುವ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಬಂದ ಒಂದೇ ವಾರದಲ್ಲಿ ಒಳಮೀಸಲಾತಿ ಜಾರಿಗೊಳಿಸಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ತೀರ್ಪು ಬಂದು ನಾಲ್ಕು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುತ್ತು ಅಮರಗೋಳ, ಶ್ರೀನಾಥ ಮಾದರ, ಕಾಂತೇಶ ಹಂಡರಗಲ್ಲ, ಶರಣು ಅಮರಗೋಳ, ಶಶಿ ಮುದ್ದೇಬಿಹಾಳ, ಸಂತು ಮುದ್ದೇಬಿಹಾಳ, ಕೃಷ್ಣಾ ಅಮರಗೋಳ, ಸುಭಾಷ ಕಾಳಗಿ, ರಾಮು ತಂಬೂರಿ, ದುರ್ಗಪ್ಪ ದೊಡಮನಿ, ಉದಯ ಕೊಪ್ಪ, ಯಮನಪ್ಪ ಮಾದರ, ಪಾವಡೆಪ್ಪ ದೊಡಮನಿ, ರಾಮಣ್ಣ ಮಾದರ, ರಮೇಶ ಕಂದಗನೂರ, ಚನ್ನಯ್ಯ ಗರಸಂಗಿ, ಲಕ್ಷ್ಮಣ ಕಾಳಗಿ, ವೀರೇಶ ದೊಡಮನಿ, ಮಲ್ಲಪ್ಪ ಕೋಳೂರ, ತಿಪ್ಪಣ್ಣ ಬನವಾಸಿ, ರಾವುತಪ್ಪ ಕಾಳಗಿ, ಬಾಲು ಮುದ್ದೇಬಿಹಾಳ, ಪರಶುರಾಮ ಮುರಾಳ ಇತರರಿದ್ದರು. ಇದೇ ವೇಳೆ ಹೋರಾಟದ ಭಿತ್ತಿಪತ್ರ, ಕರಪತ್ರ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net