ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಮ

MKG1C
Published on

ಹರಿಹರ: ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ, ತಾಲೂಕು ಶಾಖೆಗಳ ಮೇಲೆ ಸುಳ್ಳು ಆರೋಪ ಮಾಡಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಶುಕ್ರವಾರ ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ತಾಲೂಕು ಅಧ್ಯಕ್ಷ ಎ.ಕೆ. ಭೂಮೇಶ್ ಮಾತನಾಡಿ, ಸಿ.ಎಸ್. ಷಡಾಕ್ಷರಿಯವರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಪರಿಣಾಮ ರಾಷ್ಟ್ರದಲ್ಲಿಯೇ ಮಾದರಿ ಸಂಘಟನೆಯಾಗಿದೆ ಎಂದರು.

ಆದರೆ, ಸರ್ಕಾರಿ ನೌಕರರ ಸಂಘದ ಸಂಘಟನೆ ದುರ್ಬಲಗೊಳಿಸುವ ದುರುದ್ದೇಶದಿಂದ ಹುನ್ನಾರ ನಡೆಸಿರುವ ಸಂಘಟನೆ ವಿರೋಧಿ ಕೆಲ ನೌಕರರು ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರ ವಿರುದ್ಧ ಸತ್ಯಕ್ಕೆ ದೂರವಾದ ಆರೋಪ ಮಾಡಿ, ದೂರಿನ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘಟನೆಯ ಘನತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡುವಂತೆ ತಾಲೂಕು ಸರ್ಕಾರಿ ನೌಕರರ ಪರವಾಗಿ ಅಗ್ರಹಿಸುತ್ತೇವೆ ಎಂದರು.

ರೇವಣಸಿದ್ದಪ್ಪ ಅಂಗಡಿ, ಎಂ. ಉಮಣ್ಣ, ಎಂ.ಬಿ. ಮಂಜುನಾಥ್, ಪ್ರಕಾಶ್, ಶೋಭಾ ನಾರಾಯಣ ರೆಡ್ಡಿ, ಡಿ.ಟಿ. ಮಂಜಪ್ಪ, ವಿಜಯ ಪ್ರಕಾಶ್, ಮಂಜುನಾಥ್, ಮಹಮ್ಮದ್ ರಫಿ, ತುಕಾರಾಂ, ಹೇಮಂತ್ ಕುಮಾರ, ಸೋಮಶೇಖರ್, ನರಸಮ್ಮ, ಸೌಮ್ಯ, ಅಶೋಕ್, ಉಮೇಶ್, ಆರಿಫ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net