ನಕಲಿ ದಾಖಲೆ ಸೃಷ್ಟಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತೇಜೋವಧೆ

21hos2p stirke
ಹೊಸನಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ ನೇತೃತ್ವದಲ್ಲಿ ತಹಶೀಲ್ದಾರ್ ಧಮಾಂತ ಗಂಗಾಧರ ಕೋರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜಗದೀಶ್ ಕಾಗಿನೆಲೆ, ಮಲ್ಲಿಕಾರ್ಜುನ ಸ್ವಾಮಿ, ಎಚ್.ಆರ್.ಸುರೇಶ್, ಸುಧೀಂದ್ರ ಕುಮಾರ್ ಇತರರಿದ್ದರು.
Published on

ಹೊಸನಗರ: ರಾಜ್ಯ ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಂಘಟನೆಯ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಧಕ್ಕೆಯನ್ನುಂಟು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಸವಣ್ಯಪ್ಪ ನೇತೃತ್ವದಲ್ಲಿ ಸದಸ್ಯರು ಪ್ರತಿಭಟನೆ ನಡೆಸಿದರು.

ಸಿ.ಎಸ್.ಷಡಾಕ್ಷರಿ ಅಧ್ಯಕ್ಷರಾದ ನಂತ ನೌಕರ ಸ್ನೇಹಿ ಕಾರ್ಯಗಳು ನಡೆದಿವೆ. ಹತ್ತಾರು ಹೋರಾಟ ನಡೆದಿವೆ. ಸಂಘದ ಸಂಘಟನಾ ಶಕ್ತಿಗೆ ಮಣಿದು, ಸರ್ಕಾರವು ವೇತನ ಆಯೋಗದ ಭಾಗವಾಗಿ ಶೇ.17 ಮಧ್ಯಂತರ ಪರಿಹಾರ ಭತ್ಯೆಯನ್ನು ನೀಡಿದೆ. ಕೆಲವು ದುಷ್ಟಶಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಸಂಘದ ತೇಜೋವಧೆಗೆ ಮುಂದಾಗಿವೆ. ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ತಾಲೂಕು ನೌಕರರ ಸಂಘದ ಗೌರವಾಧ್ಯಕ್ಷ ಜಗದೀಶ್ ಕಾಗಿನೆಲೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಸುಧೀಂದ್ರ ಕುಮಾರ್, ಪ್ರಭಾಕರ್, ಒಡೆಯರ್ ವಿನಯ್, ಗಜೇಂದ್ರ, ಶಿವಪ್ಪ, ಸತೀಶ, ಸ್ವಾಮಿರಾವ್, ಮಾಲತೇಶ್, ವಿನಯ್ ಎಂ.ಆರಾಧ್ಯ, ರೇಣುಕೇಶ್, ವನಮಾಲ, ಶಿಲ್ಪಾ, ಭೂಮಿಕಾ, ದೀಪು, ರಾಘವೇಂದ್ರ, ಗಣೇಶ, ಸೌಮ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net