ಒಳಮೀಸಲು ವಿಧೇಯಕಕ್ಕೆ ವಿರೋಧ

12 gvt 05
ರಾಜ್ಯ ಸರ್ಕಾರ ಜಾರಿಗೊಳಿಸಿದ ಒಳಮೀಸಲು ವಿಧೇಯಕ ಖಂಡಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ಗಂಗಾವತಿ ತಾಲೂಕು ಆಡಳಿತದ ಕಚೇರಿ ಮುಂದೆ ಪ್ರತಿಭಟಿಸಿ, ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ, ಪದಾಧಿಕಾರಿಗಳಾದ ಶಿವು ಜಾಗೋಗೋರ್, ರವಿನಾಯ್ಕ ಇತರರಿದ್ದರು.
Published on

ಗಂಗಾವತಿ: ರಾಜ್ಯ ಸರ್ಕಾರ ಜಾರಿಗೊಳಿಸಿದ ಒಳಮೀಸಲು ವಿಧೇಯಕ ಖಂಡಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ತಾಲೂಕು ಆಡಳಿತ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಿದರು.


ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ ಮಾತನಾಡಿ, ಪರಿಶಿಷ್ಟ ಜಾತಿ ಒಳಮೀಸಲಿಗಾಗಿ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಖಂಡನೀಯವಾಗಿದ್ದು, ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪ್ರಕ್ರಿಯೆ. ವಸ್ತುನಿಷ್ಠ ಅಧ್ಯಯನ ಮಾಡದೇ ಸಮುದಾಯದಲ್ಲಿನ ಐಕ್ಯತೆ ಹಾಳು ಮಾಡಲು ಒಳಮೀಸಲು ಜಾರಿಗಳಿಸಲಾಗಿದೆ. ಇದರಿಂದ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಛಲವಾದಿ ಸಮುದಾಯಕ್ಕೆ ಅನ್ಯಾಯವಾಗಿದೆ. ಕೂಡಲೇ ಒಳಮೀಸಲು ವಿಧೇಯಕ ತಡೆಹಿಡಿಯಬೇಕಿದ್ದು, ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಶಿಾರಸಿಗೆ ಕಳಿಸದಂತೆ ಒತ್ತಾಯಿಸಿದರು.


ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳಾದ ಶಿವು ಜಾಗೋಗೋರ್, ರವಿನಾಯ್ಕ, ಕೃಷ್ಣನಾಯ್ಕ, ಶಶಿಕುಮಾರ, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net