ರಾಜ್ಯ ಸರ್ಕಾರ 2ಎ ಮೀಸಲು ಒದಗಿಸಲಿ

State Government, 2A Reserve, Basavajaya Mrityunjaya Swamiji, Belgaum Suvarnasoudha, Kolhara,
ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಎಲ್.ಐ.ರೂಡಗಿ, ಸದಾಶಿವ ಹಲಗಲಿ, ಚಂದ್ರಶೇಖರಗೌಡ ಪಾಟೀಲ, ಮಲ್ಲು ದೇಸಾಯಿ, ಶರಣುಸಾಹುಕಾರ ನ್ಯಾಮಗೌಡ್ರ ಇತರರಿದ್ದರು.
Published on

ಕೊಲ್ಹಾರ: ಲಿಂಗಾಯತ ಪಂಚಮಸಾಲಿ ಸಮಾಜದ ಬಹುದಿನಗಳ ಬೇಡಿಕೆಯಾದ 2ಎ ಮೀಸಲಾತಿಯನ್ನು ರಾಜ್ಯ ಸರ್ಕಾರ  ಚಳಿಗಾಲದ ಅಧಿವೇಶನದ ಒಳಗಾಗಿ ಈಡೇರಿಸಬೇಕು. ಇಲ್ಲದಿದ್ದರೆ ಸಮಾಜದ ಲಕ್ಷಾಂತರ ಜನರ ನೇತೃತ್ವದಲ್ಲಿ ಡಿ.9ಕ್ಕೆ ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ತಾಲೂಕಿನ ರೋಣಿಹಾಳದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಯುವಕ ಸಂಘ ಹಾಗೂ ಕೊಲ್ಹಾರ ತಾಲೂಕು ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮನ 246ನೇ ಜಯಂತಿ ಹಾಗೂ 200ನೇ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಚನ್ನಮ್ಮ ವೃತ್ತ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ಎ ಮೀಸಲಾತಿ ಸಲುವಾಗಿ ನನ್ನ ಹಾಗೂ ಪಂಚಮಸಾಲಿ ಸಮಾಜದ ವಕೀಲರ ನಿಯೋಗದ ಜೊತೆ ಈಚೆಗೆ ಚರ್ಚಿಸಿದ್ದಾರೆ. ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಉಪಚುನಾವಣೆಯ ನೀತಿ ಸಂಹಿತೆ ಸಬೂಬ ಹೇಳಿ ಕಳಿಸಿದ್ದಾರೆ. ಶಿವಕುಮಾರ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ಲಿಂಗಾಯತ ಮಠ ಮಾನ್ಯಗಳಿಗೆ ತೆರಳಿ ನಮ್ಮ 2ಎ ಮೀಸಲಾತಿ ಬೇಡಿಕೆ ಈಡೇರಿಸುವ ಕುರಿತು ಸ್ಪಂದಿಸಿದ್ದರು. ಹೀಗಾಗಿ ನಾವು ಅವರನ್ನು ಬೆಂಬಲಿಸಿದ್ದೀವಿ. ಅದರಿಂದ ಸದ್ಯ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಅದನ್ನು ಅವರು ಮರೆಯಬಾರದು ಎಂದರು.

ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿದರು. ಗಣ್ಯರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೋಣಿಹಾಳ ಕ್ರಾಸ್‌ನಿಂದ ಕಾರ್ಯಕ್ರಮ ನಡೆಯುವ ಮುಖ್ಯವೇದಿಕೆವರೆಗೆ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಸಾರೋಟದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ರೋಣಿಹಾಳದಲ್ಲಿ ಶ್ರೀಗಳು ಚನ್ನಮ್ಮ ವೃತ್ತವನ್ನು ಉದ್ಘಾಟಿಸಿದರು.

ವೇ.ರಾಜಶೇಖರಯ್ಯ ಹಿರೇಮಠ, ವೇ.ರಾಚೋಟಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಎಲ್.ಐ.ರೂಡಗಿ ಅಧ್ಯಕ್ಷತೆ ವಹಿಸಿದ್ದರು. ಸದಾಶಿವ ಹಲಗಲಿ, ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಉದ್ಘಾಟಿಸಿದರು.

ಅತಿಥಿಗಳಾಗಿ ಸಿ.ಆರ್.ರೂಡಗಿ, ಡಿ.ಎಸ್.ಸಾವಳಗಿ, ಶ್ರೀಶೈಲ ಬುಕ್ಕಾನಿ, ಎ.ಎಸ.ಪಾಟೀಲ, ಸುರೇಖಾ ಅಣ್ಣನೇವರ, ಚನ್ನಪ್ಪಗೌಡ ಬಿರಾದಾರ, ಮಲ್ಲು ದೇಸಾಯಿ ಬೀಳಗಿ, ಸಂಗಮೇಶ ಕುಬಕಡ್ಡಿ, ಶರಣುಸಾಹುಕಾರ ನ್ಯಾಮಗೌಡರ, ಜಗದೀಶ ಸಾಲಳ್ಳಿ, ಉದಯಕುಮಾರ ಹಳ್ಳಿ, ಬಸವರಾಜ ಬೀಳಗಿ, ಶೇಖಪ್ಪ ಕಾಗಲ್, ನಾಗರಾಜ ಬೆಳ್ಳುಬ್ಬಿ, ಮುತ್ತು ಮಮದಾಪೂರ, ಬಾಬು ಬೆಲ್ಲದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net