

ಮಂಡ್ಯ: ಬುದ್ಧ ಭಾರತ ಫೌಂಡೇಷನ್‌ನಿಂದ ಗೌತಮ ಬುದ್ಧರ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು.
ಗೌತಮ ಬುದ್ಧರು ಮಾನವನಿಗೆ ಜ್ಞಾನ ಮತ್ತು ಸತ್ಯ ಬೋಧನೆ ಮಾಡಿದ್ದಾರೆ. ಅವರ ಅಷ್ಟಾಂಗ ಮಾರ್ಗಗಳು ಎಲ್ಲ ವ್ಯಕ್ತಿಯನ್ನು ಜಾಗೃತಗೊಳಿಸುತ್ತದೆ. ಧ್ಯಾನ ಮಾರ್ಗದಿಂದ ಮಾನವನಿಗೆ ಸುಖ-ಶಾಂತಿ ಸಿಗುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಬುದ್ಧರನ್ನು ಮನೆಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
18 ರಿಂದ 25 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ಪ್ರಥಮ ಬಹುಮಾನವಾಗಿ 25,000 ರೂ, ದ್ವಿತೀಯ 15 ಸಾವಿರ ರೂ ಹಾಗೂ ತೃತೀಯ ಬಹುಮಾನ 10 ಸಾವಿರ ರೂ ಜತೆಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು. ಆಸಕ್ತರು ಸೆ.25ರೊಳಗೆ ಸ್ಪಷ್ಟವಾಗಿ ಕನ್ನಡದಲ್ಲಿ ಆರು ಪುಟದಲ್ಲಿ ಪ್ರಬಂಧ ಬರೆದು ನಕಲು ಮಾಡಿಸಿ ಅಂಚೆ ಮೂಲಕ ಮೂರು ಪ್ರತಿಯನ್ನು ಬುದ್ಧ ಭಾರತ ಫೌಂಡೇಷನ್, ಸುಂದರಪ್ಪ ಬಿಲ್ಡಿಂಗ್, ಸುಭಾಷ್‌ನಗರ, 8ನೇ ತಿರುವು, ಮಂಡ್ಯ ನಗರ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು ಎಂದು ವಿವರಿಸಿದರು.
ಸುರೇಂದ್ರನಾಥ್, ಥಾಮಸ್, ಅಮ್ಜದ್ ಪಾಷಾ, ಗಂಗರಾಜು, ಪ್ರದೀಪ್ ಇತರರಿದ್ದರು.