ರಾಜ್ಯ ನೌಕರರ ಸಂಘದ ಚುನಾವಣೆ ಫಲಿತಾಂಶ ಪ್ರಕಟ

23 kdl01
ಕೂಡ್ಲಿಗಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಚುನಾವಣೆ ಫಲಿತಾಂಶ ಪ್ರಕಟ ಬಳಿಕ ವಿಜಯೋತ್ಸವ ಆಚರಿಸಿದ ನೌಕರರು.
Published on

ಕೂಡ್ಲಿಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ 32 ನಿರ್ದೇಶಕ ಸ್ಥಾನಗಳಲ್ಲಿ 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 10 ಸ್ಥಾನಗಳಿಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್‌ನಲ್ಲಿ ಸೋಮವಾರ ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.

ಪ್ರಾಥಮಿಕ ಶಾಲೆ ಶಿಕ್ಷಕರ ಕ್ಷೇತ್ರದ 5 ಸ್ಥಾನಗಳಿಗೆ 10 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಆರ್.ಬಿ. ಬಸವರಾಜ್, ಎಂ.ಮಂಜುನಾಥ, ಟಿ.ದೊಡ್ಡಪ್ಪ, ಎಸ್.ಪಾಂಡುರಂಗ ಮತ್ತು ಟಿ.ಪ್ರವೀಣ್ ಕುಮಾರ್ ಗೆಲುವು ಸಾಧಿಸಿದರು. ಪ್ರೌಢಶಾಲೆ ಶಿಕ್ಷಕರ ಕ್ಷೇತ್ರದ 2 ಸ್ಥಾನಗಳಿಗೆ 4 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಅವರಲ್ಲಿ ಮುತ್ತುರಾಜ್, ಕೆ.ಪಿ.ಎಂ ಶಿವಾನಂದಸ್ವಾಮಿ ಆಯ್ಕೆಯಾದರು. ಆರೋಗ್ಯ ಇಲಾಖೆಯ 1 ಸ್ಥಾನಕ್ಕೆ ಸ್ಪರ್ಧಿಸಿದ ಇಬ್ಬರ ಪೈಕಿ ಶರಣೇಶ್ ಕುಮಾರ್, ಬಿಸಿಎಂ ಇಲಾಖೆ ಒಂದು ಸ್ಥಾನಕ್ಕೆ ಕುಮಾರಸ್ವಾಮಿ, ತಾಂತ್ರಿಕ ಮತ್ತು ಕೈಗಾರಿಕೆ ಇಲಾಖೆಯ ಒಂದು ಸ್ಥಾನಕ್ಕೆ ಕುರುಬರ ರಾಘವೇಂದ್ರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಜಿ.ಆಂಜನೇಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net