ಸಂಪುಟ ಸರ್ಜರಿ ಖಾತರಿ: ಸರ್ಕಾರದ ವರ್ಚಸ್ಸು ವೃದ್ಧಿಗಾಗಿ ಬಿಜೆಪಿ ವರಿಷ್ಠರ ಗಂಭೀರ ಚಿಂತನೆ

BSY
Published on

ಬೆಂಗಳೂರು: ಕರೊನಾ ಎರಡನೇ ಅಲೆಯ ಪ್ರಭಾವ, ಸಂಕಷ್ಟದ ಪರಿಸ್ಥಿತಿ ಸುಧಾರಿಸಿದ ಬಳಿಕ ರಾಜ್ಯ ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ಮರು ಸ್ಥಾಪಿಸಲು ದೊಡ್ಡ ಪ್ರಮಾಣದಲ್ಲಿ ಸಂಪುಟ ಪುನಾರಚಿಸಲು ಬಿಜೆಪಿ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಂಟನೆ ಹಾಗೂ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಇತ್ಯಾದಿ ಕಾರ್ಯತಂತ್ರ ರೂಪಿಸುತ್ತಿದ್ದು, ಇದರ ಭಾಗವಾಗಿಯೇ ಪೂರ್ವಭಾವಿ ಕಸರತ್ತಿಗೆ ಕೈಹಾಕಿದ್ದಾರೆ.


ನೀಡಿದ ಖಾತೆಯಲ್ಲಿ ಆಸಕ್ತಿ, ಹೊಸತನದ ಸ್ಪರ್ಶ, ಕ್ರಿಯಾಶೀಲತೆ, ಕರೊನಾ ಬಿಕ್ಕಟ್ಟಿಗೆ ಸ್ಪಂದನೆ, ಜನರೊಡನೆ ಬೆರೆತ ರೀತಿ, ಸರ್ಕಾರ ಮತ್ತು ಪಕ್ಷದ ಹಿತರಕ್ಷಣೆಗೆ ಪರಿಶ್ರಮ ಇತ್ಯಾದಿ ಅಂಶಗಳ ಆಧಾರದಲ್ಲಿ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ನಡೆಯುತ್ತಿದೆ. ಮುಂಬರುವ ಚುನಾವಣೆಯನ್ನು ಲಕ್ಷ$್ಯದಲ್ಲಿಟ್ಟುಕೊಂಡು ಮಹತ್ವದ ಬದಲಾವಣೆಗೆ ಹೈಕಮಾಂಡ್​ ಮುಂದಾಗಿದ್ದು, ಅನೇಕ ಸಚಿವರ ಸ್ಥಾನಪಲ್ಲಟವಾಗಿ ಹಿರಿಯರಿಗೆ ಪಕ್ಷದ ಜವಾಬ್ದಾರಿ ಹೆಗಲೇರುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಜನರ ಆತಂಕ ನಿವಾರಣೆಗೆ ಒತ್ತು ನೀಡಬೇಕಾದ ಸಂದರ್ಭದಲ್ಲಿ ಟಿಸಿದ ಅಪಸವ್ಯಗಳ ಬಗ್ಗೆ ವರಿಷ್ಠರು ಬೇಸರ ಹೊಂದಿದ್ದಾರೆ. ಅನಗತ್ಯ ಮುಜುಗರ ಸೃಷ್ಟಿಸುವ ಪ್ರಯತ್ನ ಸಹಿಸಲಾಗದು ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಕರೊನಾ ಕೆಲಸ ಬಿಟ್ಟು ಬೇರೇನೂ ಬೇಡವೆಂದು ಹೇಳಿದ ಮೇಲೂ ದೆಹಲಿಗೆ ಭೇಟಿ, ಜವಾಬ್ದಾರಿ ಮರೆತ ಹೇಳಿಕೆ ನೀಡಿದ್ದನ್ನು ಆಕ್ಷೇಪಿಸಿ, ರಾಜ್ಯ ನಾಯಕರಿಗೆ "ನೀವೇನು ಮಾಡುತ್ತಿದ್ದೀರಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬದಲಾವಣೆ ಮಾನದಂಡ

  • ಇತ್ತ ಸರ್ಕಾರ, ಅತ್ತ ಪಕ್ಷ, ಜವಾಬ್ದಾರಿ ಹೊತ್ತ ಖಾತೆಗೂ ನಿರುಪಯುಕ್ತ
  • ಕ್ಷೇತ್ರದ ಜನರೊಂದಿಗೆ ನಿಕಟತೆಯಿಲ್ಲ, ಸಚಿವರಾಗಿ ರಾಜ್ಯ ಪ್ರವಾಸವಿಲ್ಲ
  • ಖಾತೆಯ ಮೌಲ್ಯ ಹೆಚ್ಚಿಸುವಂತಹ ಪ್ರಯೋಗಶೀಲತೆ, ಪ್ರಯತ್ನಗಳಿಲ್ಲ
  • ಸಚಿವ ಪದವಿ ವೈಯಕ್ತಿಕ ಪ್ರತಿಷ್ಠೆ ಮೆರೆಯಲು ಬಳಸಿಕೊಂಡಿರುವುದು
  • ಕರೊನಾ ಸಂಕಷ್ಟ ಸಂದರ್ಭದಲ್ಲೂ ಉಪೇೆ ಧೋರಣೆ ಬಿಡದಿರುವುದು

ಸಮತೋಲನದ ಅನಿವಾರ್ಯತೆ
ಸಚಿವ ಸಂಪುಟದಲ್ಲಿ ಹೊಸತನ ತರುವ ಅನಿವಾರ್ಯತೆಯಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರು ಸಿಲುಕಿದ್ದಾರೆ. ಪ್ರ ರಾಜಕೀಯ ಬೆಳವಣಿಗೆಯಲ್ಲಿ ಬೇರೆ ಪದ ಶಾಸಕರನ್ನು ಸೆಳೆದು ಸರ್ಕಾರ ರಚಿಸಿಕೊಳ್ಳಲಾಗಿದೆ. ಜತೆಗೆ ಅವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಕೊಟ್ಟಮಾತು ಉಳಿಸಿಕೊಳ್ಳಲಾಗಿದೆ. ಆದರೆ, ಇದೇ ಕಾರಣದಿಂದ ಜಾತಿ, ಜಿಲ್ಲೆ, ಪ್ರದೇಶವಾರು ಅಸಮತೋಲನ ಉಂಟಾಯಿತು. ಹಲವು ಜಾತಿ, ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆಯದೇ ಹೋಯಿತು. ಈ ಕೊರತೆ ಸರಿಪಡಿಸಲು ಶ್ರೀದಲ್ಲಿ ಸಂಪುಟ ಪುನಾರಚನೆ ಅನಿವಾರ್ಯ ಎಂದು ವರಿಷ್ಠರು ಭಾವಿಸಿದಂತಿದೆ. ಜತೆಗೆ ಮುಂದಿನ ಚುನಾವಣೆಗಾಗಿ ಬಿಎಸ್​ವೈಗೆ ಬಲ ತುಂಬಿ, ಉತ್ಸಾಹಿ ತಂಡ ಸಜ್ಜುಗೊಳಿಸುವ ಸವಾಲಿದೆ. ಸರ್ಕಾರ ರಚನೆಗೊಂಡು ಒಂದೂವರೆ ವರ್ಷ ಕಳೆದರೂ ಜನರ ಕಣ್ಣಿಗೆ ಬೀಳುವಂತಹ ಯೋಜನೆ, ಕೆಲಸಗಳು ನಡೆದಿಲ್ಲ. ಮುಂದಿನ 23 ತಿಂಗಳೊಳಗೆ ಏನಾದರೊಂದು ಬದಲಾವಣೆ ತರಲೇಬೇಕಾಗಿದೆ. ಕೇಂದ್ರ&ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೆ ಏನೆಲ್ಲ ಸಾಧ್ಯವೆಂದು ಜನರಿಗೆ ತೋರಿಸಬೇಕಿದೆ. ಈ ಕಾರಣಕ್ಕೆ ಉತ್ಸಾಹಿ ತಂಡ ಕಟ್ಟುವುದು ವರಿಷ್ಠರಿಗೆ ತುರ್ತು ಅಗತ್ಯವಾಗಿದೆ.

ಸಿ.ಪಿ. ಯೋಗೇಶ್ವರ್​ ತಲೆದಂಡ ನಿಶ್ಚಿತ
ಮೂರು ಪಕ್ಷಗಳ ಸರ್ಕಾರವೆಂಬ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ ಸಿ.ಪಿ. ಯೋಗೇಶ್ವರ್​ ವಜಾಕ್ಕೆ ಶಾಸಕರ ಒತ್ತಾಯ, ಕೆಲವು ಸಚಿವರ ಅಸಮಾಧಾನವನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಅನ್ಯ ರಾಜಕೀಯ ಚಟುವಟಿಕೆಗಳಲ್ಲಿ ಸಿಪಿವೈ ಹೆಚ್ಚು ಆಸಕ್ತರು ಎಂಬ ಮಾಹಿತಿಯೂ ದೆಹಲಿ ನಾಯಕರಿಗೆ ಲಭ್ಯವಾಗಿದೆ. ಅಲ್ಲದೆ, ಶಾಸಕರ ಸಹಿಯುಳ್ಳ ಲಿಖಿತ ದೂರನ್ನು ವರಿಷ್ಠರಿಗೆ ವಿಜಯೇಂದ್ರ ತಲುಪಿಸಿದ್ದಾರೆ.ನಾಯಕತ್ವದ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದ ಸಿಪಿವೈ ಮಂತ್ರಿ ಸ್ಥಾನದಲ್ಲಿ ಮುಂದುವರಿದರೆ ತಪು$್ಪ ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ತಲೆದಂಡವಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಆಡಳಿತದಲ್ಲಿ ಪ್ರತಿಪಕ್ಷವೆಂಬ ಅಪಸ್ವರ ಎದ್ದು ಚರ್ಚೆ ನಡೆದಿರುವ ಸಂದರ್ಭದಲ್ಲಿಯೇ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದು, ಸಂಪುಟ ಸರ್ಜರಿ ಸುಳಿವು ನೀಡುವ ಮೂಲಕ ಒಡಕು ಧ್ವನಿಯ ನಾಯಕರಿಗೂ ಚಾಟಿ ಬೀಸಿದ್ದಾರೆ.

ವಿಜಯೇಂದ್ರ ುಲ್​ ಖುಷ್​ !
ಸಿಎಂ ಬಿಎಸ್​ವೈ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದರೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಅವರನ್ನು ಗೌಪ್ಯ ಸ್ಥಳದಲ್ಲಿ ಭೇಟಿ ಮಾಡಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕತ್ವದ ಬದಲು, ಮಂತ್ರಿಗಳ ಬದಲಾವಣೆಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂಬ ಇಂಗಿತವನ್ನು ಸಿಂಗ್​ ವ್ಯಕ್ತಪಡಿಸಿದ್ದಾರೆಂದು ಸಿಎಂ ಆಪ್ತ ಮೂಲಗಳು ಹೇಳಿವೆ. ಸಿ.ಪಿ. ಯೋಗೇಶ್ವರ್​ ದೆಹಲಿಗೆ ಭೇಟಿ ನೀಡಿ ಬಂದ ಬೆನ್ನಲ್ಲೇ ವಿಜಯೇಂದ್ರ ದೆಹಲಿಗೆ ಪ್ರಯಾಣ ಬೆಳೆಸಿರುವ ಬಗ್ಗೆ ಪಕ್ಷದ ಒಳ&ಹೊರಗೆ ಕುತೂಹಲದ ಚರ್ಚೆಗಳು ನಡೆದಿವೆ. ಇದಕ್ಕೆ ಪೂರಕವಾಗಿ ಸಂಪುಟ ಸರ್ಜರಿಗೆ ವರಿಷ್ಠರ ಚಿಂತನೆಯ ಸುಳಿವು ಸಿಕ್ಕಿರುವುದರಿಂದ ವಿಜಯೇಂದ್ರ ಭೇಟಿ ಲಪ್ರದ ಎಂದೇ ಬಿಎಸ್​ವೈ ಬಣ ಖುಷಿಯಿಂದ ಉಬ್ಬಿಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net