ಕಾನೂನು ಸುವ್ಯವಸ್ಥೆಗೆ ಬಲ

Madikeri bus
Published on

ಈ ಬಾರಿಯ ಬಜೆಟ್​ನಲ್ಲಿ ಕಾನೂನು ಸುವ್ಯವಸ್ಥೆ ಬಲವರ್ಧನೆ ಜತೆಗೆ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪೊಲೀಸ್ ತರಬೇತಿ ಕೇಂದ್ರಗಳು ಹಾಗೂ ಸಿ.ಎ.ಆರ್, ಡಿ.ಎ.ಆರ್ ಕೇಂದ್ರಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಸ್ವಯಂ ರಕ್ಷಣೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಭದ್ರತಾ ಸಮಸ್ಯೆಗಳೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಪೋಟಕಗಳು ಹಾಗೂ ಮಾದಕ ವಸ್ತುಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಗಟ್ಟುವ ಸಲುವಾಗಿ ಪೊಲೀಸ್ ಶ್ವಾನದಳದ ಬಲವರ್ಧನೆಗೆ -ಠಿ; 2.5 ಕೋಟಿ ಅನುದಾನ ಘೋಷಿಸಲಾಗಿದೆ.

ಕಾನೂನು ಸುವ್ಯವಸ್ಥೆ ನಿರ್ವಹಣೆಗಾಗಿ ಹೊಸದಾಗಿ 75 ವಾಹನಗಳನ್ನು ಖರೀದಿಸಲು ತೀರ್ವನಿಸಲಾಗಿದ್ದು, ಆ ಪೈಕಿ ಕೆಲ ವಾಹನಗಳನ್ನು ಮಹಿಳೆಯರ ಸುರಕ್ಷತೆಗೆಂದೇ ‘ಪಿಂಕ್ ಹೊಯ್ಸಳ’ಗಳಾಗಿ ಬಳಕೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ರಾಷ್ಟ್ರೀಯ ತುರ್ತು ಸ್ಪಂದನಾ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸಲು 75 ವಾಹನಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಅಗ್ನಿ ಅವಘಡಗಳನ್ನು ತಡೆಗಟ್ಟುವ ದಿಸೆಯಲ್ಲಿ ಕೆ-ಸೇಫ್ ಅಡಿಯಲ್ಲಿ ಮುಧೋಳ, ಯಲಬುರ್ಗಾ, ತೀರ್ಥಹಳ್ಳಿ, ನರಸಿಂಹರಾಜಪುರ, ಗೋಣಿಕೊಪ್ಪ, ಕುಣಿಗಲ್, ದೇವನಹಳ್ಳಿ, ಬೈಂದೂರು, ಮುಂಡಗೋಡ ಮತ್ತು ಶಿರಹಟ್ಟಿಯಲ್ಲಿ ತಲಾ 1 ಹೊಸ ಅಗ್ನಿಶಾಮಕ ಠಾಣೆ ಸ್ಥಾಪನೆ ಹಾಗೂ ಕಾರವಾರ ಬಂದರಿನಲ್ಲಿ ಅಂದಾಜು 19 ಕೋಟಿ  ರೂ. ವೆಚ್ಚದಲ್ಲಿ ಶಾಶ್ವತ ಅಗ್ನಿಶಾಮಕ ಉಪಕರಣ ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಪೊಲೀಸ್ ಗೃಹಭಾಗ್ಯ ಯೋಜನೆ: ರಾಜ್ಯ ಪೊಲೀಸ್ ಸಿಬ್ಬಂದಿಗಾಗಿ ‘ಪೊಲೀಸ್ ಗೃಹಭಾಗ್ಯ-2020’ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆಯ ಕಾಮಗಾರಿಗಾಗಿ 2020-21ನೇ ಸಾಲಿನ ಬಜೆಟ್​ನಲ್ಲಿ -ಠಿ; 200 ಕೋಟಿ ಮೀಸಲಿರಿಸಲಾಗಿದೆ.

2,450 ಹೊಸ ಬಸ್ ಖರೀದಿ

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಒದಗಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ 2,450 ಹೊಸ ಬಸ್ ಖರೀದಿಗೆ ನಿರ್ಧಾರ. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಡಿಯಲ್ಲಿ ಸ್ಥಾಪಿಸಲಾಗಿರುವ ರಸ್ತೆ ಸುರಕ್ಷತಾ ನಿಧಿಗೆ -200 ಕೋಟಿ ರೂ. ಕಾನೂನು ಸುವ್ಯವಸ್ಥೆಗೆ ಮೀಸಲಿರಿಸಲಾಗಿದೆ. ಈ ನಿಧಿಯಲ್ಲಿ ಸಂಗ್ರಹವಾಗುವ ಹಣವನ್ನು ವಿವಿಧ ರಸ್ತೆ ಸುರಕ್ಷತಾ ಚಟುವಟಿಕೆಗೆ ಬಳಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ಸಂಚರಿಸುವ ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ವೆಹಿಕಲ್ ಲೋಕೇಷನ್ ಟ್ರಾ್ಯಕಿಂಗ್ ವ್ಯವಸ್ಥೆ ಅಳವಡಿಸಲು ರಸ್ತೆ ಸುರಕ್ಷತಾ ನಿಧಿಯಿಂದ  8 ಕೋಟಿ ರೂ. ನೀಡಲು ನಿರ್ಧಾರ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವತಿಯಿಂದ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕ, ಯುವತಿಯರಿಗೆ ವಾಹನ ಚಾಲನಾ ತರಬೇತಿಗೆ ವ್ಯವಸ್ಥೆ ಕಲ್ಪಿಸಲು ತೀರ್ವನ. ಆಸನ ಸಾಮರ್ಥ್ಯ 12ಕ್ಕಿಂತ ಅಧಿಕ ಹಾಗೂ 20 ಆಸನಗಳನ್ನು ಮೀರದ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ 900 ರೂ.ತ್ರೖೆಮಾಸಿಕ ಮೋಟಾರು ವಾಹನ ತೆರಿಗೆ ನಿಗದಿಗೆ ತಿರ್ವನ. ಮೋಟಾರು ವಾಹನ ಕಾಯ್ದೆ ಕಲಂ 88(9)ರ ಅಡಿಯಲ್ಲಿ ರಹದಾರಿ ಪಡೆದು ಕಾರ್ಯಾಚರಿಸುವ ಹೊಸ ಮಾದರಿಯ ಸ್ಲೀಪರ್ ಕೋಚ್ ವಾಹನಗಳಿಗೆ ನೋಂದಣಿ ಸಮಯದಲ್ಲಿ ಪ್ರತಿ ಸ್ಲೀಪರ್​ಗೆ  4,000 ರೂ.ತ್ರೈಮಾಸಿಕ ತೆರಿಗೆ ಸಂಗ್ರಹಿಸಲು ನಿರ್ಧಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net