ಆಯವ್ಯಯಕ್ಕೆ ಸಿಎಂ ಅಂತಿಮ ಕಸರತ್ತು

BSY vvani
Published on

ಬೆಂಗಳೂರು: ಬಜೆಟ್ ಬಗ್ಗೆ ಎಲ್ಲ ಇಲಾಖೆಗಳ ಜತೆ ಪೂರ್ವಭಾವಿ ಸಭೆ ಮುಗಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಅಂತಿಮ ಹಂತದ ಸಿದ್ದತೆಯಲ್ಲಿ ತೊಡಗಿದ್ದಾರೆ.

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಒದಗಿಸಬೇಕು? ಯಾವ್ಯಾವ ಕೆಲಸಗಳಿಗೆ ಮೊದಲ ಆದ್ಯತೆ ನೀಡಬೇಕು? ಎನ್ನುವ ಬಗ್ಗೆ ಚರ್ಚೆ ನಡೆಸಿರುವ ಸಿಎಂ, ರೇಷ್ಮೆ, ತೋಟಗಾರಿಕೆ ಸೇರಿ ಹಲವು ಇಲಾಖೆಗೆ ಅನುದಾನ ಕಡಿತ ಮಾಡುವ ಸೂಚನೆ ನೀಡಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಿ ಅಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸಂತ್ರಸ್ತರಿಗೆ ಮನೆ ನಿರ್ವಣಕ್ಕೆ ಆದ್ಯತೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಲೋಕೋಪಯೋಗಿ, ವಸತಿ, ನೀರಾವರಿ ಇಲಾಖೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಕೇಂದ್ರದಿಂದ ಬರಬೇಕಾಗಿರವ ಪಾಲು ಕಡಿಮೆ ಆಗಿರುವ ಹಿನ್ನೆಲೆ ಈ ಬಾರಿಯೂ ಕಳೆದ ವರ್ಷದಷ್ಟು ಬಜೆಟ್ ಗಾತ್ರವನ್ನು ಕಾಯ್ದುಕೊಳ್ಳಲು ಹರಸಾಹಸ ಮಾಡಿದ್ದು, ಅದಕ್ಕಾಗಿ ಅಗತ್ಯವಿರುವಷ್ಟು ಸಾಲ ಮಾಡಲು ಹಸಿರು ನಿಶಾನೆ ತೋರಿದ್ದಾರೆ. ಇನ್ನೊಂದೆರಡು ದಿನದಲ್ಲಿ ಬಜೆಟ್ ಮತ್ತಷ್ಟು ಪಕ್ವತೆ ಪಡೆದುಕೊಳ್ಳಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net