ಜಿಲ್ಲಾಭಿವೃದ್ಧಿಗೆ ಸಿಗಲಿದೆಯೇ ಮನ್ನಣೆ?

vidna
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಈ ಹಿಂದಿನ ರಾಜ್ಯ ಸರ್ಕಾರಗಳಿಂದ ಜಿಲ್ಲೆಗೆ ನಿರೀಕ್ಷೆಯಷ್ಟು ಅನುದಾನ ಸಿಕ್ಕಿಲ್ಲ ಎಂಬ ಕೊರಗು ಜಿಲ್ಲೆಯ ಜನರನ್ನು ಕಾಡುತ್ತಲೇ ಇದೆ, ನಾಲ್ಕೂ ತಾಲೂಕುಗಳನ್ನೊಳಗೊಂಡಿರುವ ಗ್ರಾಮಾಂತರ ಜಿಲ್ಲೆ ರಾಜ್ಯ ರಾಜಧಾನಿಯ ಗಡಿ ಹಂಚಿಕೊಂಡಿದ್ದರೂ ಅಭಿವೃದ್ಧಿ ವಿಷಯದಲ್ಲಿ ನಿರೀಕ್ಷೆಯ ಗಡಿ ತಲುಪುತ್ತಿಲ್ಲ ಎಂಬ ಬೇಸರ ಇದ್ದೇ ಇದೆ. ಕಳೆದ ರಾಜ್ಯ ಬಜೆಟ್ ಸಹ ನಿರಾಶಾಯದಾಯವಾಗಿತ್ತು ಎಂಬ ಜನಾಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಬಾರಿ ಜಿಲ್ಲಾಭಿವೃದ್ಧಿಗೆ ಹೆಚ್ಚಿನ ಮನ್ನಣೆ ಸಿಗಲಿದೆ ಎಂಬ ಆಶಾಭಾವನೆ ಇದೆ. ನಾಲ್ಕೂ ತಾಲೂಕುಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ, ರಾಜ್ಯದ ಪ್ರಭಾವಿ ಮಂತ್ರಿ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮೇಲೆ ಜಿಲ್ಲೆಯ ಜನರು ಆಸೆಯ ಕಣ್ಣಿನಿಂದ ನೋಡುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಗ್ರಾಮಾಂತರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಮನ್ನಣೆ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

ಜಿಲ್ಲಾ ಕೇಂದ್ರ ಸದ್ದು ಮಾಡಲಿದೆಯೇ? ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಯಾದಾಗಿನಿಂದಲೂ ಜಿಲ್ಲಾ ಕೇಂದ್ರದ ೋಷಣೆ ಬಗ್ಗೆಯೇ ಆಗಾಗ ಸದ್ದು ಮಾಡುತ್ತಿರುತ್ತದೆ. ಜಿಲ್ಲಾ ಕೇಂದ್ರ ೋಷಣೆಯಾದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣಬಹುದು ಎಂಬುದು ಜನರ ನಿರೀಕ್ಷೆಯಾಗಿದೆ. ಆದರೆ ಪ್ರತಿ ಬಾರಿ ಬಜೆಟ್‌ನಲ್ಲಿಯೂ ಇದರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಕಂಡುಬರುವುದಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಸಿಎಂ ಇದಕ್ಕೆ ದನಿಯಾಗಲಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ದೇವನಹಳ್ಳಿಯ ಶಾಸಕರೇ ಉಸ್ತುವಾರಿ ಸಚಿವರಾಗಿರುವುದರಿಂದ ಜಿಲ್ಲಾ ಕೇಂದ್ರದ ಕಗ್ಗಂಟು ಬಗೆಹರಿಯಬಹುದು ಎಂಬ ನಿರೀಕ್ಷೆ ಇದೆ. ಜಿಲ್ಲಾಡಳಿತಭವನ ದೇವನಹಳ್ಳಿಯಲ್ಲಿ ಸ್ಥಾಪಿತಗೊಂಡಿರುವುದರಿಂದ ಜತೆಗೆ ಇಲ್ಲಿನ ಶಾಸಕರೇ ಸಚಿವರಾಗಿರುವುದರಿಂದ ದೇವನಹಳ್ಳಿಗೆ ಆದ್ಯತೆ ಸಿಗಬಹುದೆಂಬ ನಿರೀಕ್ಷೆ ದಟ್ಟವಾಗಿದೆ. ಜಿಲ್ಲಾಡಳಿತ ದೇವನಹಳ್ಳಿ ಸ್ಥಳಾಂತರಗೊಂಡಿರುವುದರಿಂದ ದೇವನಹಳ್ಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ದೇವನಹಳ್ಳಿ ಪಟ್ಟಣಕ್ಕೂ ಕಾವೇರಿ ನೀರು ಪೂರೈಕೆಯಾಬೇಕು, ಟಿಪ್ಪು ಕೋಟೆ ಅಭಿವೃದ್ಧಿ, ಕೆಂಪೇಗೌಡರ ಪೂರ್ವಿಕರು ನೆಲೆಸಿದ್ದ ಆವತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.

ವಿಜಯಪುರ ಪ್ರಸ್ತಾಪ: ದೇವನಹಳ್ಳಿ ತಾಲೂಕಿನ ಹೋಬಳಿಯಾಗಿರುವ ವಿಜಯಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ನಾನಾ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ, ವಿಜಯಪುರ ದೊಡ್ಡ ಹೋಬಳಿಯಾಗಿದ್ದು ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದೆ ಎಂಬುದು ಹೋರಾಟಗಾರರ ಬಲವಾದ ಒತ್ತಾಯವಾಗಿದೆ. ಪ್ರತಿ ಬಾರಿ ಬಜೆಟ್ ವೇಳೆಯೂ ವಿಜಯಪುರಕ್ಕೆ ಮಾನ್ಯತೆ ಸಿಗಬಹುದು ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ. ಆದರೆ ಪ್ರತಿ ಬಜೆಟ್‌ನಲ್ಲೂ ಇದರ ಪ್ರಸ್ತಾಪ ಕಡೆಗಣಿಸಲ್ಪಡುತ್ತಲೇ ಬಂದಿದೆ. ಈ ಬಾರಿಯೂ ಈ ನಿರೀಕ್ಷೆ ಮುಂದುವರೆದಿದೆ.

ಕಸ ಘಟಕದ ಸುತ್ತಲಿನ ಗ್ರಾಮಗಳಿಗೆ ಸೌಕರ್ಯ: ದೊಡ್ಡಬಳ್ಳಾಪುರ ತಾಲೂಕಿನಲ್ಲಿನ ಕಸ ಸಂಸ್ಕರಣಾ ಘಟಕಗಳ ಸುತ್ತಮುತ್ತಲಿನ ಗ್ರಾಮಗಳಿಗೆ ಅನೇಕ ಮೂಲಸೌಕರ್ಯ, ಹಲವು ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಈ ಹಿಂದಿನಿಂದಲೂ ಸ್ಥಳೀಯರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಂದು ಕಡೆ ಘಟಕಗಳನ್ನು ಮುಚ್ಚಬೇಕು ಎಂಬ ಆಗ್ರಹವಿದ್ದರೆ ಮತ್ತೊಂದೆಡೆ ಘಟಕದ ಸುತ್ತಲಿನ ಗ್ರಾಮಗಳಿಗೆ ಆರೋಗ್ಯ, ಸೇರಿ ವಿಶೇಷ ಸೌಲಭ್ಯ ದೊರಕಿಸಿಕೊಡಬೇಕೆಂಬ ಆಗ್ರಹವಿದೆ. ರಾಜ್ಯ ಸರ್ಕಾರ ಇಂಥ ಗ್ರಾಮಗಳಿಗೆ ವಿಶೇಷ ಒತ್ತು ನೀಡಲಿದೆಯೇ ಎಂಬ ನಿರೀಕ್ಷೆಯಲ್ಲಿ ಜನ ಎದುರು ನೋಡುತ್ತಿದ್ದಾರೆ.

ನೇಕಾರರಿಗೆ ಸಿಗಲಿದೆಯೇ ಆದ್ಯತೆ? ರಾಜ್ಯದ ಹೆಚ್ಚಿನ ನೇಕಾರರಿರುವ ಜಿಲ್ಲೆಗಳ ಪೈಕಿ ಗ್ರಾಮಾಂತರ ಮುಂಚೂಣಿಯಲ್ಲಿದೆ ಲಕ್ಷಾಂತರ ಮಂದಿ ನೇಕಾರಿಕೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ನೇಕಾರರ ಕಲ್ಯಾಣ ನಿಧಿ ರಚನೆ, ಸೀರೆಗೆ ಬ್ರಾಂಡಿಂಗ್ ಸೇರಿ ಸಾಕಷ್ಟು ಯೋಜನೆಗಳು ೋಷಣೆಯಾಗಲಿವೆ ಎಂಬ ನಿರೀಕ್ಷೆ ನೇಕಾರರದ್ದಾಗಿದೆ. ಗುರುತಿನ ಚೀಟಿ, ಸಹಾಯಧನ, ವಿದ್ಯುತ್ ಸೇರಿ ಕೆಲವೊಂದು ಬೇಡಿಕೆಗಳಿದ್ದು ಈ ಬಾರಿಯ ಬಜೆಟ್‌ನಲ್ಲಿ ಇವೆಕ್ಕೆಲ್ಲ ಸ್ಥಾನ ಸಿಗಲಿದೆಯೆ ಕಾದು ನೋಡಬೇಕಿದೆ.

ಸೋಂಪುರಕ್ಕೆ ವಿಶೇಷ ಒತ್ತು? ಪ್ರಮುಖ ಕೈಗಾರಿಕಾ ಪ್ರದೇಶವೆಂದು ಗುರುತಿಸಿಕೊಂಡಿರುವ ಸೋಂಪುರ ಹೋಬಳಿ ಪ್ರಮುಖ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ, ಸೋಂಪುರದಲ್ಲಿ ದಕ್ಷಿಣ ಕಾಶಿ ಶಿವಗಂಗೆ, ಅಗಳಕುಪ್ಪೆಯ ಶ್ರೀ ಸಿದ್ದರಬೆಟ್ಟ, ಹೇಗ್ಗುಂದದ ಶ್ರೀರಾಮ ಬೆಟ್ಟ, ಕೆಂಗಲ್ ಬೆಟ್ಟ ಹಾಗೂ ನರಸೀಪುರ ಶ್ರೀರಾಮನ ಬೆಟ್ಟಗಳಿಂದ ಪ್ರಮುಖ ಯಾತ್ರಾಕ್ಷೇತ್ರವಾಗಿ ಗಮನ ಸೆಳೆದಿದೆ. ಸರ್ಕಾರ ಕೈಗಾರಿಕಾ ವಲಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಬಹುದು ಎಂಬ ನಿರೀಕ್ಷೆ ಇದೆ.

---

ಪ್ರಮುಖ ನಿರೀಕ್ಷೆಗಳೇನು?

1 ಜಿಲ್ಲಾ ಕೇಂದ್ರ ೋಷಣೆಯಾಗಬೇಕು

2 ಹೊಸಕೋಟೆ ಹಾಗೂ ನೆಲಮಂಗಲ ಭಾಗಕ್ಕೆ ಮೆಟ್ರೋ ಸಂಚಾರ ವಿಸ್ತರಣೆಯಾಗಬೇಕು

3ಹೊಸಕೋಟೆ ಹಾಗೂ ದೇವನಹಳ್ಳಿಗೆ ಕಾವೇರಿ ನೀರು ಸಂಪರ್ಕ ಸಿಗಬೇಕು

4.ವಿಜಯಪುರ ತಾಲೂಕು ೋಷಣೆಯಾಗಬೇಕು

5 ಜಿಲ್ಲೆಯ ಪ್ರಮುಖ ಉದ್ಯಮ ನೇಕಾರಿಕೆಗೆ ವಿಶೇಷ ಅನುದಾನ ಮೀಸಲಿಡಬೇಕು

6.ಹೊಸಕೋಟೆ ಭಾಗದಲ್ಲಿ ಕೈಗಾರಿಕಾ ಹಬ್ ಸ್ಥಾಪನೆಯಾಗಬೇಕು.

7.ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು.

8 ಮಧುರೆನಲ್ಲಿ ಭಗೀರಥ ಪೀಠ ಸ್ಥಾಪನೆಯಾಗಬೇಕು

9 ಜಿಲ್ಲೆಯ ನಾಲ್ಕೂ ತಾಲೂಕುಗಳನ್ನು ಸ್ಯಾಟಲೈಟ್ ಸಿಟಿಯನ್ನಾಗಿ ೋಷಿಸಬೇಕು

10 ನಗರಸಭೆ, ಪುರಸಭೆ ಅಭಿವದ್ಧಿಗೆ ವಿಶೇಷ ಪ್ಯಾಕೇಜ್

11 ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ ಅಭಿವದ್ಧಿಗೆ ಅನುದಾನ

12 ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಸ್ಥಾಪನೆಯಾಗಬೇಕಿತ್ತು.

13 ಟಿಪ್ಪುಕೋಟೆ ಅಭಿವೃದ್ಧಿ, ಕೆಂಪೇಗೌಡರ ಪೂರ್ವಿಕರು ನೆಲೆಸಿದ್ದ ಆವತಿ ಅಭಿವೃದಿ

14ಕೋಗಿಲು-ರಾಜಾನಕುಂಟೆವರೆಗೆ 10.6 ಕಿ.ಮೀ. ಮೆಟ್ರೋ ರೈಲು ಸೇವೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net