ಲೇಖಕ ಸುರೇಶ ಗುದಗನವರಗೆ ರಾಜ್ಯ ಪ್ರಶಸ್ತಿ

8 Dwd 1 (Suresh Gudaganavar)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಲೇಖಕ ಸುರೇಶ ಗುದಗನವರ ಅವರಿಗೆ ಹೊಸದುರ್ಗದ ಅಪ್ಪ ಅವ್ವ ಅಕ್ಷರ ಪ್ರಕಾಶನ ಸಂಸ್ಥೆಯ ಸುವರ್ಣ ಕರ್ನಾಟಕ ಸಂಭ್ರಮ ರಾಜ್ಯ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕೃತಿಗಳನ್ನು ನೀಡಿರುವ ಗುದಗನವರ, ಅಂಕಣ ಬರಹಗಾರರೂ ಆಗಿದ್ದಾರೆ. ಲಯನ್ಸ್ ಸಂಸ್ಥೆ, ಇಂಟ್ಯಾಕ್, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯರಾಗಿ ಅವರು ಕಾರ್ಯ ಸಲ್ಲಿಸುತ್ತಿದ್ದಾರೆ. ನ. 9ರಂದು ಹೊಸದುರ್ಗದ ಎಸ್‌ಎಲ್ ವಿ ಕನ್ವೆನ್ಷನ್ ಹಾಲ್‌ನಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಮಾಚೇನಹಳ್ಳಿ ರಾಮಕೃಷ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net