

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ನಿವೃತ್ತ ಜಿಲ್ಲಾ ಗ್ರಂಥಾಲಯ ಅಽಕಾರಿ ಜಿ.ಬಿ. ಹೊಂಬಳ ಅವರು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕಾರ್ಯನಿರ್ವಹಿಸುವಂಥ ಕ್ರಿಯಾಶೀಲ ಉತ್ಸಾಹಿ ಲೇಖಕರ ಕೃತಿಗಳಿಗೆ ಕೊಡಮಾಡುವ 2024ನೇ ಸಾಲಿನ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ'ಗೆ ಬಾಗಲಕೋಟೆಯ ಸಾಹಿತಿ ರಾಜಶೇಕರ ಕುಕ್ಕುಂದಾ ಅವರಬಿಸಿ ಬಿಸಿ ಬಾತು (ಮಕ್ಕಳ ಕವಿತೆಗಳು) ಆಯ್ಕೆಯಾಗಿದೆ. ನ. 10ರಂದು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 15,000 ರೂಪಾಯಿ ನಗದು ಸಮೇತ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.