ಆವಿಷ್ಕಾರಕ್ಕೆ ಸ್ಟಾರ್ಟ್​ಅಪ್​ ನೆರವು

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​.ಎಸ್​. ಬೋಸರಾಜು, ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಸದ್ಗುರು ಶ್ರೀ ಮಧುಸೂದನ ಸಾಯಿ, ಇಂಡಿಯನ್​ ಸ್ಟಾರ್ಟ್​ ಆ್ಯಪ್​ ೆಸ್ಟಿವಲ್​ ಮುಖ್ಯಸ್ಥ ಜೆ.ಎ.ಚೌದರಿ ಮತ್ತಿತರರು ಇದ್ದರು.
Aavishkarakke Startup Neravu
Published on

ಮುದ್ದೇನಹಳ್ಳಿಯಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ರಾಜ್ಯದಲ್ಲಿ ಸ್ಟಾರ್ಟ್​ಅಪ್​ ಮತ್ತು ಉದ್ದಿಮೆಗಳು, ನೂತನ ಉತ್ಪನ್ನಗಳ ಸಂಶೋಧನೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣಕ್ಕಾಗಿ ಕರ್ನಾಟಕ ಸಂಶೋಧನಾ ೌಂಡೇಷನ್​ ಸ್ಥಾಪಿಸಲಾಗುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​.ಎಸ್​. ಬೋಸರಾಜು ತಿಳಿಸಿದ್ದಾರೆ.
ಮುದ್ದೇನಹಳ್ಳಿ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂಡಿಯನ್​ ಸ್ಟಾರ್ಟ್​ಅಪ್​ ೆಸ್ಟಿವಲ್​ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವೈಜ್ಞಾನಿಕ ಹಾಗೂ ತಂತ್ರಜ್ಞಾನ ೇತ್ರದಲ್ಲಿ ಹೊಸ ಆವಿಷ್ಕಾರಗಳು, ಆರ್ಥಿಕ ಚಟುವಟಿಕೆಗೆ ಸ್ಟಾರ್ಟ್​ಅಪ್​ ಎಕೋಸಿಸ್ಟಮ್​ಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಬೆಂಗಳೂರು ನಗರವು ಸ್ಟಾರ್ಟ್​ಅಪ್​ಗಳ ರಾಜಧಾನಿ ಎಂತಲೂ ಹೆಸರುವಾಸಿ. ಇಲ್ಲಿನ ಹೂಡಿಕೆಯ ಪೂರಕ ವಾತಾವರಣದ ಕಾರಣದಿಂದಾಗಿ ಹೆಚ್ಚಿನ ಉದ್ದಿಮೆಗಳು ಸ್ಥಾಪನೆಯಾಗುತ್ತಿವೆ ಎಂದರು.
ಶಿಣದಲ್ಲಿ ವೈಜ್ಞಾನಿಕ ಅಂಶಗಳ ಅಳವಡಿಕೆ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ದಿಮೆಗಳಿಗೆ ಅನುಕೂಲಕರ ವಾತಾವರಣ, ಪರಿಸರ ಸುಸ್ಥಿರತೆ
ಕಾಪಾಡುವ ನಿಟ್ಟಿನಲ್ಲಿ ರೋಬಸ್ಟ್​ ಎಕಾನಮಿಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ ಎಂದರು.
ಹೊಸ ಉದ್ದಿಮೆಗಳು ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ನಿರಂತರ ಸಂಶೋಧನೆಗಳ ಅಗತ್ಯವಿದೆ. ಇದಕ್ಕೆ ಉತ್ತಮ ಉತ್ಪನ್ನಗಳನ್ನು ಹಾಗೂ ಸೇವೆಗಳನ್ನು ನೀಡುವ ಗುರಿ ಸಾಧಿಸುವಂತಾಗಲು ನೂತನವಾಗಿ ಸ್ಥಾಪನೆಯಾಗಲಿರುವ ಕರ್ನಾಟಕ ರಿಸರ್ಚ್​ ೌಂಡೇಷನ್​ ಸಹಕಾರಿ. ಇದರಲ್ಲಿ ಖಾಸಗಿ ಸಂಸ್ಥೆಗಳು, ಪ್ರತಿಷ್ಠಾನಗಳು ಮತ್ತು ವ್ಯಕ್ತಿಗಳು ಸಂಶೋಧನೆ, ಅಭಿವೃದ್ಧಿಗೆ ಉತ್ತೇಜನಕಾರಿ ಕೊಡುಗೆಯ ವ್ಯವಸ್ಥೆ ಇರುತ್ತದೆ ಎಂದರು.
ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಸದ್ಗುರು ಶ್ರೀ ಮಧುಸೂದನ ಸಾಯಿ, ಇಂಡಿಯನ್​ ಸ್ಟಾರ್ಟ್​ ಆ್ಯಪ್​ ೆಸ್ಟಿವಲ್​ ಮುಖ್ಯಸ್ಥ ಜೆ.ಎ.ಚೌದರಿ ಮತ್ತಿತರರು ಇದ್ದರು.
ಗುರಿ ಸಾಧನೆಗೆ ಸರ್ಕಾರ ಬದ್ಧ
ರಾಜ್ಯದ ಯುವ ಉದ್ಯಮಿಗಳ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಸುಸ್ಥಿರ ಆರ್ಥಿಕತೆ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ. ಕೆಎಸ್​ಆರ್​ಎ್​ ಮೂಲಕ ಹಂತ ಹಂತವಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ ಜಿಡಿಪಿಯ ಶೇ.3 ಹಣವನ್ನು ಸಂಶೋಧನಾ ಚಟುವಟಿಕೆಗೆ ವಿನಿಯೋಗಿಸುವ ಗುರಿ ಹೊಂದಲಾಗಿದೆ. ರಾಜ್ಯದ ಜ್ಞಾನಾರ್ಜನೆಯ ಕೇಂದ್ರಗಳಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳಿಗೆ ಇಂಬು ನೀಡುವ ಮೂಲಕ ಹೊಸ ಸ್ಟಾರ್ಟ್​ಅಪ್​ಗಳನ್ನು ಬೆಳೆಸಲಾಗುವುದು ಎಂದು ಸಚಿವ ಎನ್​.ಎಸ್​. ಬೋಸರಾಜು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆ
ಇಂಡಿಯನ್​ ಸ್ಟಾರ್ಟ್​ಅಪ್​ ೆಸ್ಟಿವಲ್​ ನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆಗಳು ಗಮನ ಸೆಳೆದವು. ಹೊಸ ಕಾರ್ಯಕ್ರಮಗಳು, ಸಂಶೋಧನೆಯ ಸೌಲಭ್ಯಗಳು, ಹೊಸ ಸ್ಟಾರ್ಟ್​ಅಪ್​ಗಳ ಮಾಹಿತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net