ಆರಂಭಗೊಂಡ ತೆರವು ಕಾರ್ಯಾಚರಣೆ

20CKD1
Published on

ಚಿಕ್ಕೋಡಿ: ಬಹುದಿನಗಳಿಂದ ನನೆಗುದಿಗೆ ಬಿದಿದ್ದ ಚಿಕ್ಕೋಡಿ ಪಟ್ಟಣದ ಗುರುವಾರ ಪೇಟೆ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ರಸ್ತೆ ಅಗಲೀಕರಣ ವ್ಯಾಪ್ತಿಗೆ ಒಳ ಪಡುವ ಅಂಗಡಿಗಳ ತೆರವು ಕಾರ್ಯಾಚರಣೆ ಭರದಿಂದ ಆರಂಭಗೊಂಡಿದೆ.

ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಅಂಕಲಿಖೂಟವರೆಗೆ ಈಗಿರುವ 20 ಅಡಿ ಇಕ್ಕಟ್ಟಾದ ರಸ್ತೆಯನ್ನು 34 ಅಡಿ ಅಗಲೀಕರಣಗೊಳಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ಕಳೆದ ಒಂದು ವರ್ಷದ ಹಿಂದಿಯೇ ರಸ್ತೆ ಅಗಲೀಕರಣ ಕಾಮಗಾರಿಗೆ ಸರ್ಕಾರದಿಂದ 7 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಆದರೆ, ಅಗಲೀಕರಣದ ವ್ಯಾಪ್ತಿಗೆ ಒಳ ಪಡುವ ಅಂಗಡಿ ಹಾಗೂ ಮನೆ ಸೇರಿ 150 ಆಸ್ತಿಗಳ ತೆರವು ಕಾರ್ಯಕ್ಕೆ ಮನೆಗಳ ದಾಖಲಾತಿ ತಾಂತ್ರಿಕ ತೊಂದರೆ, ಪುರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆ, ಪರಿಹಾರಕ್ಕೆ ಹೆಚ್ಚಿನ ಬೇಡಿಕೆ ಸೇರಿದಂತೆ ವಿವಿಧ ಕಾರಣಗಳಿಂದ ತೆರವು ಕಾರ್ಯಾಚರಣೆ ನನೆಗುದಿಗೆ ಬಿದಿತ್ತು.

ವಿಜಯವಾಣಿಯಲ್ಲಿ ವರದಿ ಪ್ರಕಟ: ಈ ಕುರಿತು ಸಪ್ತ ಕೋಟಿ ಇದ್ದರೂ ಅಭಿವೃದ್ಧಿಗೆ ಗ್ರಹಣ ಎಂಬ ಶೀರ್ಷಿಕೆಯಡಿ ಏ.14 ರಂದು ವಿಜಯವಾಣಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈಗ ಪುರಸಭೆ, ಕಂದಾಯ ಇಲಾಖೆ ಹಾಗೂ ಜನರ ಸಹಕಾರದಿಂದ ಸಮಸ್ಯೆ ಇತ್ಯರ್ಥಗೊಂಡು ಅಂಗಡಿಗಳ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net