

ಯಾವುದೇ ಕಾಮಗಾರಿಯನ್ನು ಸಂಪೂರ್ಣ ಅನುದಾನವಿಲ್ಲದೆ ಆರಂಭಿಸಬಾರದು, ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗಲಿದೆ. ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಇದ್ದರೆ ಮಾತ್ರ ಆರಂಭಿಸುವಂತೆ ಶಾಸಕ ಕೆ.ಹರೀಶ್‌ಗೌಡ ಸೂಚನೆ ನೀಡಿದರು.
ನಗರ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ ಚಾಮರಾಜ ಕ್ಷೇತ್ರದ ಅಭಿವೃದ್ಧ್ಧಿ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕ್ಷೇತ್ರ ವ್ತಾಪ್ತಿಯ ಅರೆಬರೆ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುದಾನದ ಕೊರತೆ ಎದುರಾಗಿದ್ದು, ಮುಂದಿನ ಹಂತದಲ್ಲಿ ಅನುದಾನ ಸಿಕ್ಕ ಕೂಡಲೇ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಅದಕ್ಕೆ ಉತ್ತರಿಸಿದ ಶಾಸಕರು, ಯಾವುದೇ ಕಾಮಗಾರಿಯನ್ನು ಸಂಪೂರ್ಣ ಅನುದಾನವಿಲ್ಲದೆ ಆರಂಭಿಸಬಾರದು, ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗಲಿದೆ. ಕಾಮಗಾರಿಗೆ ಅಗತ್ಯವಾಗಿರುವ ಅನುದಾನ ಇದ್ದರೆ ಮಾತ್ರ ಆರಂಭಿಸುವಂತೆ ತಿಳಿಸಿದರು.