

ವಿಜಯಪುರ: ನಗರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ವೃಥಾನ್ ಹೆರಿಟೇಜ್ ರನ್ಗೆ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಸಚಿವ ಎಂ.ಬಿ. ಪಾಟೀಲರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೃಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ&2025 ಪೂರ್ವ ತಯಾರಿ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಬಾರಿ ನಡೆದ ಹೆರಿಟೇಜ್ ರನ್ನಲ್ಲಿ ಕಂಡುಬಂದ ಲೋಪಗಳನ್ನು ಈ ಬಾರಿ ಸರಿಪಡಿಸಬೇಕು. ನೋಂದಣಿ ಪ್ರಕ್ರಿಯೆ ಮತ್ತಷ್ಟು ಸರಳೀಕರಣಗೊಳಿಸುವ ಮೂಲಕ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು. ಅಲ್ಲದೆ, ಪರಿಸರ ಜಾಗೃತಿ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸಲು ಕಾಯೋರ್ನ್ಮುಖರಾಗಬೇಕು ಎಂದು ಅವರು ಹೇಳಿದರು.
ಈ ಬಾರಿ ಟಿ&ಶರ್ಟ್ ವಿತರಣೆಯನ್ನು ಸುಗಮವಾಗಿ ನಡೆಸಬೇಕು. ಸಾಂಸತಿಕ ಸಮಿತಿಯವರು ಕಾರ್ಯಕ್ರಮಗಳನ್ನು ಮತ್ತಷ್ಟು ಆಕರ್ಷಣೀಯವಾಗಿ ಹಮ್ಮಿಕೊಳ್ಳಬೇಕು. ರೂಟ್, ರೇಸ್ ಮತ್ತು ಹೈಡ್ರೇಷನ್ ಸಮಿತಿ ಸೇರಿದಂತೆ ಮುಂತಾದ ಈ ಬಾರಿಯ ಮ್ಯಾರಾಥಾನ್ನಲ್ಲಿ ಎಲ್ಲ ೇತ್ರಗಳ ಜನರು ಮತ್ತು ಯುವಕರು ಪಾಲ್ಗೊಳ್ಳಲು ಸದ್ಯದಿಂದಲೇ ಯೋಜನೆ ರೂಪಿಸುವಂತೆ ಸೂಚಿಸಿದರು.
ಸಭೆಗೂ ಮುನ್ನ ಬೆಂಗಳೂರಿನ ಆರ್ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತದಲ್ಲಿ ಅಸುನೀಗಿದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಜೂ. 8 ರಂದು ನಿಧನರಾದ ಶತಾಯುಷಿ ಸಂಗವ್ವ ಮಲಕಯ್ಯ ಸ್ವಾಮಿ ಅವರಿಗೆ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶುಭಶ್ರೀ ಗ್ರುಪ್ಸ್ನ ವ್ಯವಸ್ಥಾಪಕ ನಿರ್ದೇಶಕ ಶಾಂತೇಶ ಕಳಸಗೊಂಡ, ಕೋರ್ ಕಮಿಟಿ ಮುಖಂಡರಾದ ಡಾ. ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಔರಸಂಗ, ಶಂಭು ಕರ್ಪೂರಮಠ, ಸುರೇಶ ೂಣಸಗಿ, ಡಾ. ರಾಜು ಯಲಗೊಂಡ, ಅಪ್ಪು ಭೈರಗೊಂಡ, ಡಾ. ಪ್ರವಿಣ ಚೌರ, ಅಶ್ಪಾಕ ಮನಗೂಳಿ, ಸಮೀರ ಬಳಗಾರ, ಡಿ.ಕೆ. ತಾವಸೆ, ಗುರುಶಾಂತ ಕಾಪಸೆ, ಶಿವಾನಂದ ಯರನಾಳ, ಗಜಾನನ ಮಂದೋಲಿ, ಸಚೀನ ಪಾಟೀಲ, ಜಗದೀಶ ಪಾಟೀಲ, ಸಂದೀಪ ಮಡಗೊಂಡ, ನವೀದ ನಾಗಠಾಣ, ವೀಣಾ ದೇಶಪಾಂಡೆ, ಎಂ.ಪಿ. ಕುಪ್ಪಿ, ಪ್ರದಿಪ ಕುಂಬಾರ ಮತ್ತಿತರರಿದ್ದರು.