

ಗೋಣಿಕೊಪ್ಪ: ಮಾಯಮುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಳ್ಳಲಿರುವ 5.20 ಲಕ್ಷ ರೂ. ವೆಚ್ಚದ ಶೌಚಗೃಹ ಕಾಮಗಾರಿಗೆ ಮಾಯಮುಡಿ ಗ್ರಾಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಬುಧವಾರ ಚಾಲನೆ ನೀಡಿದರು.
ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣಗೊಳ್ಳುತ್ತಿದೆ. ಪಿಡಿಒ ರವಿ ಮೆಟ್ಟಲಕೋಡ್, ನರೇಗಾ ಇಂಜಿನಿಯರ್ ಗಣೇಶ್, ಗ್ರಾಪಂ ಉಪಾಧ್ಯಕ್ಷೆ ಪಿ.ಎಸ್.ಶಾಂತಾ, ಸದಸ್ಯರಾದ ಎಚ್.ಆರ್.ಸುಶೀಲಾ, ಜೆ.ಸುಮಿತ್ರಾ ಬಸವಣ್ಣ, ಸಿ.ಕೆ.ಪೂವಯ್ಯ, ಪಿ.ಮುತ್ತಮ್ಮ, ಶಾಲಾ ಮುಖ್ಯಶಿಕ್ಷಕಿ ವಾಣಿ ನಾಚಪ್ಪ, ಗುತ್ತಿಗೆದಾರರಾದ ಕಾಚುಮ ಖದೀಜ ಮತ್ತಿತರರು ಉಪಸ್ಥಿತರಿದ್ದರು.